ADVERTISEMENT

ಕಂಪನಿಗಳನ್ನು ಮುನ್ನಡೆಸುವಂತಹ ಕೆಲಸ ಮಾಡಿ: ಸಿಎಸ್‌ಗಳಿಗೆ ಬೊಮ್ಮಾಯಿ ಕರೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 14:24 IST
Last Updated 6 ಜನವರಿ 2022, 14:24 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಕಂಪನಿಗಳಿಗೆ ಸಲಹೆ ನೀಡುವುದಷ್ಟೇ ಅಲ್ಲದೆ, ಕಂಪನಿಯನ್ನು ಮುನ್ನಡೆಸುವಂತಹ ಕೆಲಸವನ್ನು ಕಂಪನಿ ಸೆಕ್ರೆಟರಿಗಳು (ಸಿ.ಎಸ್‌.) ಮಾಡಬೇಕು. ಯಾವುದೇ ಪ್ರಮುಖ ನಿರ್ಧಾರಗಳಲ್ಲಿ ಕಂಪನಿ ಸೆಕ್ರೆಟರಿಗಳ ಪಾತ್ರ ಮುಖ್ಯವಾಗಿರಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ನಡೆದ ಕಂಪನಿ ಸೆಕ್ರೆಟರಿಗಳ 49ನೇ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಂಪನಿ ಸೆಕ್ರೆಟರಿಗಳು ದೇಶದ ಆರ್ಥಿಕ ನೀತಿ ರೂಪಿಸುವಲ್ಲಿ ಭಾಗವಹಿಸುವಿಕೆಯ ಅಗತ್ಯ ಇದೆ’ ಎಂದರು.

ಆನ್‌ಲೈನ್‌ ಮೂಲಕ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಸಂಘಟಿತ ಮತ್ತು ಅಸಂಘಟಿತ ವಲಯಗಳನ್ನು ಒಗ್ಗೂಡಿಸಲು ಕಂಪನಿ ಸೆಕ್ರೆಟರಿಗಳು ಪ್ರಮುಖ ಪಾತ್ರವಹಿಸಬೇಕು ಎಂದು ಕರೆ ನೀಡಿದರು.

ADVERTISEMENT

‘ಎರಡು ದಶಕಗಳ ನಂತರ ಬೆಂಗಳೂರಿನಲ್ಲಿ ಇಂತಹ ಉತ್ತಮ ಸಮಾವೇಶ ನಡೆಯುತ್ತಿದೆ. ತಾಂತ್ರಿಕ ವಿಚಾರಗೋಷ್ಠಿಗಳು ಹೊಸ ಅವಕಾಶಗಳನ್ನು ಸೃಷ್ಟಿಸಲು ನೆರವಾಗಲಿವೆ’ ಎಂದುಇನ್‌ಸ್ಟಿಟ್ಯೂಟ್‌ ಆಫ್‌ ಕಂಪನಿ ಸೆಕ್ರೆಟರೀಸ್ ಆಫ್‌ ಇಂಡಿಯಾ (ಐಸಿಎಸ್‌ಐ) ಅಧ್ಯಕ್ಷ ಸಿ.ಎಸ್‌. ನಾಗೇಂಧ್ರ ಡಿ. ರಾವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.