ADVERTISEMENT

ಬ್ಯಾಡಗಿ ಮಾರುಕಟ್ಟೆಗೆ ದಾಖಲೆಯ ಆವಕ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 19:15 IST
Last Updated 15 ಫೆಬ್ರುವರಿ 2021, 19:15 IST
ಬ್ಯಾಡಗಿ ಮಾರುಕಟ್ಟೆಗೆ ಸೋಮವಾರ ದಾಖಲೆಯ ಪ್ರಮಾಣದಲ್ಲಿ ಮಾರಾಟಕ್ಕೆ ತಂದಿರುವ ಮೆಣಸಿನಕಾಯಿ
ಬ್ಯಾಡಗಿ ಮಾರುಕಟ್ಟೆಗೆ ಸೋಮವಾರ ದಾಖಲೆಯ ಪ್ರಮಾಣದಲ್ಲಿ ಮಾರಾಟಕ್ಕೆ ತಂದಿರುವ ಮೆಣಸಿನಕಾಯಿ   

ಬ್ಯಾಡಗಿ (ಹಾವೇರಿ): ಇಲ್ಲಿಯ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸೋಮವಾರ 2,12,266 ಚೀಲ (53,066 ಕ್ವಿಂಟಲ್‌) ಮೆಣಸಿನಕಾಯಿ ಆವಕವಾಗಿದೆ. ಇದು ಪ್ರಸಕ್ತ ಹಂಗಾಮಿನಲ್ಲಿನ ದಾಖಲೆಯ ಆವಕ.

ಹೀಗಾಗಿ ರಸ್ತೆಯ ಮೇಲೆಯೇ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಗಿತ್ತು. ಕಳೆದ ಸೋಮವಾರ 1,97,770 ಚೀಲ (49,500 ಕ್ವಿಂಟಲ್‌) ಆವಕವಾಗಿತ್ತು.

ಸಾವಯವ ಪದ್ಧತಿಯಲ್ಲಿ ಬೆಳೆದ ಒಂದು ಚೀಲ (25 ಕೆ.ಜಿ) ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹ 60,111ರಂತೆ ಮಾರಾಟವಾಗಿದೆ. ಉಳಿದಂತೆ ಬ್ಯಾಡಗಿ ಕಡ್ಡಿ ಮತ್ತು ಗುಂಟೂರು ತಳಿ ಮೆಣಸಿನಕಾಯಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿವೆ. ಒಟ್ಟು 332 ಖರೀದಿ ವರ್ತಕರು ಇಂದಿನ ಟೆಂಡರ್‌ನಲ್ಲಿ ಭಾಗವಹಿಸಿದ್ದರು. ಗುಣಮಟ್ಟದ ಕೊರತೆ ಇರುವ 489 ಲಾಟ್‌ಗಳಿಗೆ ಟೆಂಡರ್‌ ನಿರಾಕರಿಸಲಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.