ADVERTISEMENT

ಬ್ಯಾಡಗಿ ಡಬ್ಬಿ, ಕಡ್ಡಿ ಮೆಣಸಿನಕಾಯಿ ದಾಖಲೆಯ ದರ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 21:44 IST
Last Updated 17 ಡಿಸೆಂಬರ್ 2020, 21:44 IST
ಕಡ್ಡಿ ಮೆಣಸಿನಕಾಯಿ
ಕಡ್ಡಿ ಮೆಣಸಿನಕಾಯಿ   

ಬ್ಯಾಡಗಿ (ಹಾವೇರಿ): ಇಲ್ಲಿಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುವಾರ ಮಾರಾಟವಾದ ಪ್ರತಿ ಕ್ವಿಂಟಲ್‌ ಬ್ಯಾಡಗಿ ಡಬ್ಬಿ ಮೆಣಸಿನಕಾಯಿಗೆ ₹36,999 ಹಾಗೂ ಕಡ್ಡಿ ಮೆಣಸಿನಕಾಯಿಗೆ ₹32,009 ಬೆಲೆ ದೊರೆತಿದೆ. ಇದು ಮಾರುಕಟ್ಟೆ ಇತಿಹಾಸದಲ್ಲಿಯೇ ದಾಖಲೆಯ ಬೆಲೆ.

ಕಳೆದ ಸೋಮವಾರಕ್ಕೆ ಹೋಲಿಸಿದರೆ ಡಬ್ಬಿ ಮೆಣಸಿನಕಾಯಿ ಗರಿಷ್ಠ ಬೆಲೆಯಲ್ಲಿ ₹1,444, ಕಡ್ಡಿ ಮೆಣಸಿನಕಾಯಿಗರಿಷ್ಠ ಬೆಲೆಯಲ್ಲಿ
₹ 6 ಸಾವಿರ ಹಾಗೂ ಗುಂಟೂರು ತಳಿ ಮೆಣಸಿನಕಾಯಿಯ ಗರಿಷ್ಠ ಬೆಲೆಯಲ್ಲಿ ₹ 600 ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT