ADVERTISEMENT

ಚೀನಾದ ಕಾರು ಮಾರಾಟ ಸೆಪ್ಟೆಂಬರ್‌ನಲ್ಲಿ ಶೇ 21.2ರಷ್ಟು ಹೆಚ್ಚಳ

ರಾಯಿಟರ್ಸ್
Published 11 ಅಕ್ಟೋಬರ್ 2022, 2:41 IST
Last Updated 11 ಅಕ್ಟೋಬರ್ 2022, 2:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್‌: ಚೀನಾದ 19.5 ಲಕ್ಷ ಪ್ರಯಾಣಿಕ ಕಾರುಗಳು ಸೆಪ್ಟೆಂಬರ್‌ ತಿಂಗಳಲ್ಲಿಮಾರಾಟಗೊಂಡಿವೆ. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಮಾರಾಟವು ಶೇ 21.2 ರಷ್ಟು ಏರಿಕೆಯಾಗಿದೆ ಎಂದು ಚೀನಾ ಪ್ರಯಾಣಿಕ ಕಾರು ಒಕ್ಕೂಟ (ಸಿಪಿಸಿಎ) ಮಂಗಳವಾರ ತಿಳಿಸಿದೆ.

ಯುಎಸ್‌ ಮೂಲಕ ಎಲೆಕ್ಟ್ರಿಕ್‌ ವಾಹನ ತಯಾರಕ ಸಂಸ್ಥೆ ಟೆಸ್ಲಾದ ಚೀನಾ ನಿರ್ಮಿತ83,135 ಕಾರುಗಳು ಸೆಪ್ಟೆಂಬರ್‌ನಲ್ಲಿ ಮಾರಾಟವಾಗಿವೆ. ಇದರಲ್ಲಿ 5,522 ಕಾರುಗಳು ರಫ್ತಾಗಿವೆ ಎಂದೂ ಸಿಪಿಸಿಎ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT