ನವದೆಹಲಿ (ಪಿಟಿಐ): ಆದ್ಯತಾ ವ್ಯಾಪಾರ ಒಪ್ಪಂದ ರದ್ದುಪಡಿಸಿರುವ ಅಮೆರಿಕಕ್ಕೆ ತಿರುಗೇಟು ನೀಡಲು ಭಾರತ ಯೋಜನೆ ರೂಪಿಸುತ್ತಿದೆ ಎಂದು ವ್ಯಾಪಾರ ಉತ್ತೇಜನ ಮಂಡಳಿ (ಟಿಪಿಸಿಐ) ಹೇಳಿದೆ.
ಅಮೆರಿಕದ ಸರಕುಗಳಿಗೆ ಗರಿಷ್ಠ ಆಮದು ಸುಂಕ ಹೇರುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಲು ಸಿದ್ಧತೆ ನಡೆಯುತ್ತಿದೆ ಎಂದು ತಿಳಿಸಿದೆ.
‘ಅಮೆರಿಕದ ಸವಾಲುಗಳನ್ನು ಎದುರಿಸಲು ಭಾರತದ ರಫ್ತುದಾರರು ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಒಪ್ಪಂದ ರದ್ದುಪಡಿಸುವುದರಿಂದ ಭಾರತಕ್ಕೆ ಹೆಚ್ಚುವರಿಯಾಗಿ ₹ 1,330 ಕೋಟಿ ಹೊರೆಯಾಗುವ ಅಂದಾಜು ಮಾಡಲಾಗಿದೆ. ಅಮೆರಿಕಕ್ಕೆ ಭಾರತದ ಒಟ್ಟಾರೆ ರಫ್ತು ವಹಿವಾಟಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆಯಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.