
ಸಾಂಕೇತಿಕ ಚಿತ್ರ
ನವದೆಹಲಿ: ದೇಶೀಯ ಮಾರ್ಗದ ವಿಮಾನಗಳಲ್ಲಿ ಪ್ರಯಾಣಿಕರ ಸಂಚಾರ ವಾರ್ಷಿಕ ಸರಾಸರಿ ಶೇ 9ರಷ್ಟು ಹೆಚ್ಚಳವಾಗಿದೆ. 2014ರಲ್ಲಿ 395 ವಿಮಾನಗಳಿದ್ದವು. ಇದು ಈಗ 844ಕ್ಕೆ ಏರಿಕೆಯಾಗಿದೆ ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಹೇಳಿದ್ದಾರೆ.
ಪ್ರಸಕ್ತ ವರ್ಷ ನಾಗರಿಕ ವಿಮಾನಯಾನ ವಲಯವು ಎದುರಿಸುತ್ತಿರುವ ಸವಾಲುಗಳು, ಸುರಕ್ಷತೆ, ದಕ್ಷತೆ ಮತ್ತು ನಾಗರಿಕರ ವಿಶ್ವಾಸವನ್ನು ಹೆಚ್ಚಿಸುವ ನಮ್ಮ ಸಂಕಲ್ಪವನ್ನು ಬಲಪಡಿಸಿವೆ ಎಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
2025ನೇ ವರ್ಷವು ದೇಶದ ನಾಗರಿಕ ವಿಮಾನಯಾನಕ್ಕೆ ಕಲಿಕೆ ಮತ್ತು ಬದಲಾವಣೆಯ ಅವಧಿ ಎಂದು ಹೇಳಿದ್ದಾರೆ.
ದೇಶದ ವಿಮಾನಯಾನ ವಲಯವು ಹೆಚ್ಚು ಅರ್ಹ ಎಂಜಿನಿಯರ್‌ಗಳನ್ನು ಹೊಂದಿದೆ. ಜೊತೆಗೆ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್‌ಗೆ ಹೋಲಿಸಿದರೆ ಭಾರತದ ಕಾರ್ಯಾಚರಣೆ ವೆಚ್ಚವು ಕಡಿಮೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಮಹಾನಿರ್ದೇಶಕ ಫೈಜ್ ಅಹ್ಮದ್ ಕಿದ್ವಾಯಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.