ADVERTISEMENT

ಸಿಕೆಪಿ ಸಹಕಾರಿ ಬ್ಯಾಂಕ್‌ ಲೈಸೆನ್ಸ್‌ ರದ್ದು

ಪಿಟಿಐ
Published 3 ಮೇ 2020, 21:04 IST
Last Updated 3 ಮೇ 2020, 21:04 IST

ಮುಂಬೈ: ಆರ್ಥಿಕ ಸ್ಥಿತಿ ಹದಗೆಟ್ಟ, ಠೇವಣಿ ಹಿಂದಿರುಗಿಸಲೂ ಸಾಧ್ಯವಿಲ್ಲದ ಪರಿಸ್ಥಿತಿಗೆ ತಲುಪಿರುವ ಮುಂಬೈನ ಸಿಕೆಪಿ ಕೊ–ಆಪರೇಟಿವ್‌ ಬ್ಯಾಂಕ್‌ನ ಲೈಸನ್ಸ್‌ ಅನ್ನು ಆರ್‌ಬಿಐ ರದ್ದುಮಾಡಿದೆ.

ಕನಿಷ್ಠ ಬಂಡವಾಳ ಪ್ರಮಾಣ ಶೇ 9ರಷ್ಟನ್ನು ಕಾಯ್ದುಕೊಳ್ಳುವಲ್ಲಿ ಬ್ಯಾಂಕ್‌ ವಿಫಲವಾಗಿದ್ದು, ಏಪ್ರಿಲ್‌ 30ರಿಂದ ಅನ್ವಯಿಸುವಂತೆ ಲೈಸೆನ್ಸ್‌ ರದ್ದುಪಡಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಇದರಿಂದಾಗಿ ಠೇವಣಿ ಸ್ವೀಕರಿಸುವುದು, ನೀಡುವುದನ್ನೂ ಒಳಗೊಂಡಂತೆ ಯಾವುದೇ ರೀತಿಯ ಬ್ಯಾಂಕಿಂಗ್‌ ವಹಿವಾಟುಗಳನ್ನು ನಡೆಸುವಂತಿಲ್ಲ. ಠೇವಣಿದಾರರ ಹಣ ಮರಳಿಸುವ ಪ್ರಕ್ರಿಯೆ ಆರಂಭಿಸಬೇಕಾಗಿದೆ ಎಂದೂ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.