

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್
ನವದೆಹಲಿ: 19 ಕೆ.ಜಿಯ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ತೈಲ ಕಂಪನಿಗಳು ₹ 49 ಏರಿಸಿವೆ. ಇಂದಿನಿಂದಲೇ (ಫೆ. 1) ಹೊಸ ದರ ಅನ್ವಯವಾಗಲಿದೆ.
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಕಳೆದ ತಿಂಗಳಿನಲ್ಲಿಯೂ ವಾಣಿಜ್ಯ ಸಿಲಿಂಡರ್ ದರ ₹ 111 ಏರಿಕೆಯಾಗಿತ್ತು.
ಹೊಸ ಏರಿಕೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆ.ಜಿ ಸಿಲಿಂಡರ್ ದರ ₹ 1740.50 ಇದ್ದರೆ, ಬೆಂಗಳೂರಿನಲ್ಲಿ ಅಂದಾಜು ₹1,764.50ಗೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.