ADVERTISEMENT

ಇಂಧನ ಸ್ವಾವಲಂಬನೆಗೆ ಬದ್ಧ: ಟೊಯೊಟ

ಇಂಡಿಯಾ ಎನರ್ಜಿ ವೀಕ್: ವಾಹನಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 16:03 IST
Last Updated 11 ಫೆಬ್ರುವರಿ 2025, 16:03 IST
ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ವಾಹನಗಳನ್ನು ಪ್ರದರ್ಶಿಸಿದ ಟೊಯೊಟ ಕಂಪನಿ
ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ವಾಹನಗಳನ್ನು ಪ್ರದರ್ಶಿಸಿದ ಟೊಯೊಟ ಕಂಪನಿ   

ಬೆಂಗಳೂರು: ‘2047ರ ವೇಳೆಗೆ ಇಂಧನ ಸ್ವಾವಲಂಬನೆ ಹಾಗೂ 2070ರ ವೇಳೆಗೆ ಇಂಗಾಲ ಹೊರಸೂಸುವಿಕೆಯಲ್ಲಿ ಶೂನ್ಯತೆ ಸಾಧಿಸುವ ಭಾರತದ ಆಶಯಕ್ಕೆ ಪೂರಕವಾಗಿ ಕಂಪನಿಯು ಕಾರ್ಯ ನಿರ್ವಹಿಸುತ್ತಿದೆ’ ಎಂದು ಟೊಯೊಟ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ಹೇಳಿದೆ.

ಇಂಡಿಯಾ ಎನರ್ಜಿ ವೀಕ್ (ಐಇಡಬ್ಲ್ಯು) ಕಾರ್ಯಕ್ರಮವು ಇಂಧನ ಸ್ವಾವಲಂಬನೆ  ಸಾಧಿಸಲು ನೆರವಾಗಲಿದೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ನೆರವಾಗುವ ಪ್ರಾಯೋಗಿಕ ಮತ್ತು ಅತ್ಯುತ್ತಮ ಇಂಧನ ಉತ್ಪನ್ನಗಳನ್ನು ಪ್ರದರ್ಶಿಸುವ ಪ್ರಮುಖ ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದೆ.

ಫೆಬ್ರುವರಿ 11ರಿಂದ 14ರ ವರೆಗೆ ನಡೆಯಲಿರುವ ಇಂಡಿಯಾ ಎನರ್ಜಿ ವೀಕ್– 2025 ಕಾರ್ಯಕ್ರಮದಲ್ಲಿ ಕಂಪನಿಯು, ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (ಎಸ್ಎಚ್ಇವಿ), ಇನ್ನೋವಾ ಹೈಕ್ರಾಸ್ (ಎಸ್ಎಚ್ಇವಿ), ಹೈಬ್ರಿಡ್ ಎಲೆಕ್ಟ್ರಿಕ್ ಸಿಸ್ಟಂ ಮತ್ತು ಇ20 ಕಂಪ್ಲೈಂಟ್ ಪ್ರದರ್ಶನ ಮಾಡಲಾಗುತ್ತಿದೆ ಎಂದು ಹೇಳಿದೆ.

ADVERTISEMENT

ಜೊತೆಗೆ ಫ್ಲೆಕ್ಸ್- ಫ್ಯುಯಲ್ ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ಪ್ರೊಟೊಟೈಪ್ (ಎಫ್ಎಫ್ ವಿ- ಪಿಎಚ್ಇವಿ), ಪ್ರಯಸ್ (ಎಫ್ಎಫ್‌ವಿ-ಪಿಎಚ್ಇವಿ), ಅರ್ಬನ್ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (ಬಿಇವಿ), ಫ್ಯುಯೆಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ), ಎಲೆಕ್ಟ್ರಿಕ್ ವೆಹಿಕಲ್ ಸಬ್-ಸಿಸ್ಟಮ್ ಅನ್ನು ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದೆ. 

‘ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಿಸಲು ಕಂಪನಿ ಬದ್ಧವಾಗಿದೆ. ಇದುವರೆಗೆ 4.47 ಲಕ್ಷ ಟನ್‌ ಕಾರ್ಬನ್ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ವಸ್ತುಗಳ ಸಾಗಣೆಗೆ ರೈಲ್ವೆಯನ್ನು ಬಳಸಿಕೊಳ್ಳಲಾಗಿದೆ. 2023-24ನೇ ಆರ್ಥಿಕ ವರ್ಷದಲ್ಲಿ ಪ್ರತಿ ವಾಹನಕ್ಕೆ 7.7 ಕೆ.ಜಿ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲಾಗಿದೆ’ ಎಂದು ಕಂಪನಿಯ ಕಾರ್ಪೊರೇಟ್ ವ್ಯವಹಾರಗಳು ಮತ್ತು ಆಡಳಿತದ ವಿಭಾಗದ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಹಾಗೂ ಕಂಟ್ರಿ ಹೆಡ್ ವಿಕ್ರಮ್ ಗುಲಾಟಿ ಹೇಳಿ‌ದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.