ನವದೆಹಲಿ: ಕಸ್ಟಮ್ಸ್ ಸುಂಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಷೋಕಾಸ್ ನೋಟಿಸ್ ಸ್ವೀಕರಿಸಲಾಗಿದ್ದು, ಅಧಿಕಾರಿಗಳ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಜರ್ಮನಿಯ ವಾಹನಗಳ ತಯಾರಿಕಾ ಕಂಪನಿ ವೋಕ್ಸ್‌ವ್ಯಾಗನ್ ತಿಳಿಸಿದೆ.
ಆಮದು ಕಾರುಗಳಿಗೆ ಸಂಬಂಧಿಸಿದಂತೆ ₹11 ಸಾವಿರ ಕೋಟಿ ಕಸ್ಟಮ್ಸ್ ಸುಂಕ ವಂಚನೆ ಪ್ರಕರಣದ ಬಗ್ಗೆ ನೋಟಿಸ್ ಸ್ವೀಕರಿಸಲಾಗಿದೆ. ನೋಟಿಸ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸ್ಕೋಡಾ ಆಟೊ ವೋಕ್ಸ್‌ವ್ಯಾಗನ್ ಇಂಡಿಯಾ ತಿಳಿಸಿದೆ.
ಕಂಪನಿಯು ಜಾಗತಿಕ ಹಾಗೂ ಸ್ಥಳೀಯ ಕಾನೂನು ಮತ್ತು ನಿಯಮಾವಳಿಗಳನ್ನು ಪಾಲಿಸಲಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.