ADVERTISEMENT

‘₹ 5 ಕೋಟಿಗೂ ಹೆಚ್ಚಿನ ವಹಿವಾಟಿಗೆ ಇ–ಇನ್‌ವಾಯ್ಸ್‌’

ಪಿಟಿಐ
Published 7 ಜುಲೈ 2022, 15:34 IST
Last Updated 7 ಜುಲೈ 2022, 15:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜಿಎಸ್‌ಟಿ ಅಡಿ ನೋಂದಣಿ ಆಗಿರುವ, ವಾರ್ಷಿಕವಾಗಿ ₹ 5 ಕೋಟಿಗೂ ಹೆಚ್ಚಿನ ವಹಿವಾಟು ನಡೆಸುವ ಉದ್ದಿಮೆಗಳು ಬಿ2ಬಿ ವಹಿವಾಟಿಗೆ ಇನ್ನು ಮುಂದೆ ಇ–ಇನ್‌ವಾಯ್ಸ್‌ ಸೃಷ್ಟಿಸಬೇಕಾಗುತ್ತದೆ.

ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯ (ಸಿಬಿಐಸಿ) ಅಧ್ಯಕ್ಷ ವಿವೇಕ್‌ ಜೊಹ್ರಿ ಈ ಮಾಹಿತಿ ನೀಡಿದ್ದಾರೆ.

ಇ–ಇನ್‌ವಾಯ್ಸ್‌ ಸೃಷ್ಟಿಸುವುದನ್ನು ಹಂತ ಹಂತವಾಗಿ ಜಾರಿಗೆ ತರಲು ಜಿಎಸ್‌ಟಿ ಮಂಡಳಿಯು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಪಿಎಚ್‌ಡಿಸಿಸಿಐ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇ–ಇನ್‌ವಾಯ್ಸ್‌ ಸೃಷ್ಟಿಸುವುದರಿಂದ ತೆರಿಗೆ ಅಧಿಕಾರಿಗಳು ಇನ್‌ವಾಯ್ಸ್‌ ಅನ್ನು ತಾಳೆ ಮಾಡಿ ನೋಡುವುದು ತಪ್ಪಲಿದೆ’ ಎಂದು ತಿಳಿಸಿದ್ದಾರೆ.

ಸದ್ಯ, ವಾರ್ಷಿಕವಾಗಿ ₹ 20 ಕೋಟಿಗೂ ಹೆಚ್ಚಿನ ವಹಿವಾಟು ನಡೆಸುವ ಉದ್ದಿಮೆಗಳು ಇ–ಇನ್‌ವಾಯ್ಸ್‌ ಸೃಷ್ಟಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.