ADVERTISEMENT

ವಸತಿ ಯೋಜನೆ ವಿಳಂಬ: ಕಟ್ಟಡ ನಿರ್ಮಾಣ ಸಾಮಗ್ರಿ ದುಬಾರಿ

ಮಹೇಶ ಕುಲಕರ್ಣಿ
Published 2 ಜುಲೈ 2020, 19:39 IST
Last Updated 2 ಜುಲೈ 2020, 19:39 IST
-
-   

ಬೆಂಗಳೂರು: ಕಟ್ಟಡ ನಿರ್ಮಾಣ ಸಾಮಗ್ರಿಗಳು ತುಟ್ಟಿಯಾಗಿರುವ ಮತ್ತು ಕಾರ್ಮಿಕರ ಅಲಭ್ಯತೆಯಿಂದಾಗಿ ಬೆಂಗಳೂರಿನ ಹಲವಾರು ವಸತಿ ನಿರ್ಮಾಣ ಯೋಜನೆಗಳು ವಿಳಂಬವಾಗಲಿವೆ.

ಲಾಕ್‌ಡೌನ್‌ ಸಡಿಲಿಕೆ ನಂತರ ಸಿಮೆಂಟ್‌ ಬೆಲೆ ಪ್ರತಿ ಚೀಲಕ್ಕೆ ಶೇ 25 ರಿಂದ ಶೇ 30ರಷ್ಟು ಏರಿಕೆಯಾಗಿ ₹ 350ಕ್ಕೆ ಮತ್ತು ಉಕ್ಕಿನ ಬೆಲೆ ಪ್ರತಿ ಟನ್‌ಗೆ ಶೇ 15ರಷ್ಟು ಹೆಚ್ಚಳಗೊಂಡು ₹ 45 ಸಾವಿರಕ್ಕೆ ತಲುಪಿದೆ. ಕಾರ್ಮಿಕರ ಕೊರತೆ ಕಾರಣಕ್ಕೆ ಕೂಲಿಯು ಶೇ 15ರಿಂದ ಶೇ 20ರಷ್ಟು ಹೆಚ್ಚಳಗೊಂಡಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ಕಟ್ಟಡ ನಿರ್ಮಾಣಗಾರರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ವಸತಿ ನಿರ್ಮಾಣ ಯೋಜನೆಗಳು ವಿಳಂಬವಾಗಲಿವೆ.

‘ನಗರಗಳಿಂದ ತಮ್ಮ ಸ್ವಂತ ಊರಿಗೆ ಮರಳಿರುವ ಕಾರ್ಮಿಕರು ದೀಪಾವಳಿ ನಂತರವೇ ಮರಳುವ ಸಾಧ್ಯತೆ ಇದೆ. ಲಭ್ಯ ಇರುವ ಕುಶಲ ಕಾರ್ಮಿಕರನ್ನು ದೊಡ್ಡ ರಿಯಲ್‌ ಎಸ್ಟೇಟ್‌ ಕಂಪನಿಗಳು ಹೆಚ್ಚಿನ ಕೂಲಿ ನೀಡುವ ಪ್ರಲೋಭನೆ ಒಡ್ಡಿ ಸೆಳೆಯುತ್ತಿವೆ. ಸರಕುಗಳ ಪೂರೈಕೆಯಲ್ಲಿನ ಅಡಚಣೆ ಮತ್ತು ಕಾರ್ಮಿಕರ ವಲಸೆಯಿಂದ ಒಟ್ಟಾರೆ ಕಟ್ಟಡ ನಿರ್ಮಾಣ ವೆಚ್ಚವು ಶೇ 5 ರಿಂದ ಶೇ 10ರಷ್ಟು ತುಟ್ಟಿಯಾಗಿದೆ’ ಎಂದು ವೆಸ್ಟಿಯನ್‌ ಗ್ಲೋಬಲ್‌ ವರ್ಕ್‌ಪ್ಲೇಸ್‌ ಸರ್ವಿಸಸ್‌ನ ಸಿಇಒ ಶ್ರೀನಿವಾಸ ರಾವ್‌ ಹೇಳಿದ್ದಾರೆ.

ADVERTISEMENT

'ನಿರ್ಮಾಣ ಸ್ಥಳದಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವುದೂ ಸೇರಿದಂತೆ ಒಟ್ಟಾರೆ ನಿರ್ಮಾಣ ವೆಚ್ಚ ಹೆಚ್ಚಳದಿಂದ ನಮ್ಮಂತಹ ಸಣ್ಣ ಮತ್ತು ಮಧ್ಯಮ ಕಟ್ಟಡ ನಿರ್ಮಾಣಗಾರರು ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ಭದ್ರಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್‌. ಬಿ. ಸರ್ವೇಶ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹಲವಾರು ಪ್ರತಿಕೂಲತೆಗಳ ಕಾರಣಕ್ಕೆ ವಸತಿ ನಿರ್ಮಾಣ ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರ ಮತ್ತು ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರವು 6 ತಿಂಗಳ ಕಾಲಾವಕಾಶ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.