ADVERTISEMENT

ರಿಟೇಲ್‌: 80 ಸಾವಿರ ಉದ್ಯೋಗ ನಷ್ಟ ಸಾಧ್ಯತೆ

ಪಿಟಿಐ
Published 7 ಏಪ್ರಿಲ್ 2020, 20:00 IST
Last Updated 7 ಏಪ್ರಿಲ್ 2020, 20:00 IST
ಸಾಂದರ್ಬಿಕ ಚಿತ್ರ
ಸಾಂದರ್ಬಿಕ ಚಿತ್ರ   

ನವದೆಹಲಿ: ಲಾಕ್‌ಡೌನ್‌ನಿಂದಾಗಿ ರಿಟೇಲ್ ವಲಯದಲ್ಲಿ80 ಸಾವಿರ ಉದ್ಯೋಗಗಳು ನಷ್ಟವಾಗಲಿವೆ ಎಂದು ರಿಟೇಲ್‌ ವ್ಯಾಪಾರಿಗಳ ಸಂಘ (ಆರ್‌ಎಐ) ಹೇಳಿದೆ.

ದೇಶದಾದ್ಯಂತ 768 ರಿಟೇಲ್‌ ವಹಿವಾಟುದಾರರ ಅಭಿಪ್ರಾಯ ಸಂಗ್ರಹಿಸಿ ಈ ಮಾಹಿತಿ ನೀಡಲಾಗಿದೆ. ಈ ವಹಿವಾಟುದಾರರು 3.92 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ.

ಸಣ್ಣ ರಿಟೇಲ್‌ ವಹಿವಾಟುದಾರರು ತಮ್ಮ ಒಟ್ಟಾರೆ ಸಿಬ್ಬಂದಿಯಲ್ಲಿ ಶೇ 30ರಷ್ಟು ಕಡಿತ ಮಾಡುವ ಸಾಧ್ಯತೆ ಇದೆ. ಮಧ್ಯಮ ಪ್ರಮಾಣ ವಹಿವಾಟುದಾರರು ಶೇ 12ರಷ್ಟು ಮತ್ತು ದೊಡ್ಡ ಪ್ರಮಾಣದ ವಹಿವಾಟುದಾರರು ಶೇ 5ರಷ್ಟು ಸಿಬ್ಬಂದಿ ಕಡಿತ ಮಾಡಲಿದ್ದಾರೆ ಎಂದು ಒಕ್ಕೂಟ ಹೇಳಿದೆ.

ADVERTISEMENT

ಮಾರ್ಚ್‌ 25ರಂದು ಲಾಕ್‌ಡೌನ್‌ ವಿಧಿಸಿದ ಬಳಿಕ ಶೇ 95ರಷ್ಟು ಆಹಾರಯೇತರ ರಿಟೇಲ್‌ ಉದ್ದಿಮೆದಾರರು ತಮ್ಮ ಮಳಿಗೆಗಳನ್ನು ಬಂದ್ ಮಾಡಿದ್ದು, ಗಳಿಕೆಯೇ ಇಲ್ಲದಂತಾಗಿದೆ. ಆರು ತಿಂಗಳಿನಲ್ಲಿ ಕಳೆದ ವರ್ಷದ ವರಮಾನಕ್ಕಿಂತಲೂ ಶೇ 40ರಷ್ಟು ಕಡಿಮೆ ಇರಲಿದೆ ಎಂದು ಹೇಳಿದ್ದಾರೆ.

ಆಹಾರ ಉತ್ಪನ್ನಗಳ ಮಾರಾಟ ಮಾಡುವವರು ಮುಂದಿನ ಆರು ತಿಂಗಳಿನಲ್ಲಿ ಕಳೆದ ವರ್ಷದ ವರಮಾನದ ಸೇ 56ರಷ್ಟು ಗಳಿಸುವ ಅಂದಾಜು ಮಾಡಿದ್ದಾರೆ.

70%ಆರು ತಿಂಗಳಿನಲ್ಲಿ ವಹಿವಾಟು ಚೇತರಿಸಿಕೊಳ್ಳುವ ನಿರೀಕ್ಷೆ ಹೊಂದಿರುವವರು

20%ವಹಿವಾಟು ಚೇತರಿಸಿಕೊಳ್ಳಲು ಒಂದು ವರ್ಷ ಬೇಕು ಎಂದು ಹೇಳಿರುವವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.