ADVERTISEMENT

ಕಚ್ಚಾತೈಲ ಉತ್ಪಾದನೆ ಇಳಿಕೆ

ಪಿಟಿಐ
Published 23 ಮೇ 2020, 19:46 IST
Last Updated 23 ಮೇ 2020, 19:46 IST
ಕಚ್ಚಾತೈಲು (ಪ್ರಾತಿನಿಧಿಕ ಚಿತ್ರ)
ಕಚ್ಚಾತೈಲು (ಪ್ರಾತಿನಿಧಿಕ ಚಿತ್ರ)   

ನವದೆಹಲಿ: ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿ ಇರುವುದರಿಂದ ಕಚ್ಚಾತೈಲ, ನೈಸರ್ಗಿಕ ಅನಿಲ ಉತ್ಪಾದನೆ ಕಡಿಮೆ ಮಾಡಲಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.

ಕಚ್ಚಾ ತೈಲ ಉತ್ಪಾದನೆ ಏಪ್ರಿಲ್‌ನಲ್ಲಿ ಶೇ 6.35ರಷ್ಟು ಇಳಿಕೆ ಆಗಿದ್ದು, 25 ಲಕ್ಷ ಟನ್‌ಗಳಷ್ಟಾಗಿದೆ.ಒಎನ್‌ಜಿಸಿ ಉತ್ಪಾದನೆ 17 ಲಕ್ಷ ಟನ್‌ಗಳಷ್ಟಿದೆ.

ಲಾಕ್‌ಡೌನ್‌ನಿಂದಾಗಿ ಬಹಳಷ್ಟು ವಾಹನಗಳು ರಸ್ತೆಗಿಳಿಯದೇ ಇರುವುದರಿಂದ ತೈಲ ಸಂಸ್ಕರಣಾಗಾರಗಳು ಏಪ್ರಿಲ್‌ನಲ್ಲಿ ಶೇ 30ರಷ್ಟು ಕಡಿಮೆ ಸಂಸ್ಕರಣೆ ಮಾಡಿವೆ.

ADVERTISEMENT

ನೈಸರ್ಗಿಕ ಅನಿಲ ಉತ್ಪಾದನೆ ಶೇ 18.6ರಷ್ಟು ಕಡಿಮೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.