ADVERTISEMENT

ದಾನ ಸ್ವಯಂಪ್ರೇರಿತ ಆಗಿರಬೇಕು: ಅಜೀಂ ಪ್ರೇಮ್‌ಜಿ

ಪಿಟಿಐ
Published 20 ಫೆಬ್ರುವರಿ 2021, 21:59 IST
Last Updated 20 ಫೆಬ್ರುವರಿ 2021, 21:59 IST
ಅಜೀಂ ಪ್ರೇಮ್‌ಜಿ
ಅಜೀಂ ಪ್ರೇಮ್‌ಜಿ   

ನವದೆಹಲಿ: ‘ದಾನ ಅಥವಾ ಸಮಾಜಕ್ಕೆ ಕೊಡುಗೆ ನೀಡುವುದು ಸ್ವಯಂಪ್ರೇರಿತವಾಗಿರಬೇಕು’ ಎಂದು ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಆಲ್‌ ಇಂಡಿಯಾ ಮ್ಯಾನೇಜ್‌ಮೆಂಟ್‌ ಅಸೋಸಿಯೇಷನ್‌ (ಎಐಎಂಎ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಂಪನಿಗಳು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿರ್ವಹಿಸುವುದನ್ನು ಕಾನೂನಾತ್ಮಕವಾಗಿ ಕಡ್ಡಾಯ ಮಾಡುವುದು ಸರಿಯಲ್ಲ. ಅದು ಸ್ವಯಂ ಪ್ರೇರಿತವಾಗಿರಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಅವರು ಹೇಳಿದ್ದಾರೆ.

‘ಆದರೆ, ಪ್ರಸ್ತುತ ಸಿಎಸ್‌ಆರ್‌ ಕಾನೂನಾತ್ಮಕ ಹೊಣೆಗಾರಿಕೆಯಾಗಿದ್ದು, ಇದನ್ನು ಎಲ್ಲಾ ಕಂಪನಿಗಳೂ ಅನುಸರಿಸಲೇಬೇಕಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

2020ರಲ್ಲಿ ಕೋವಿಡ್‌ ಸಾಂಕ್ರಾಮಿಕ ನಿಯಂತ್ರಿಸಲು ಅವರು ಒಟ್ಟಾರೆ ₹ 7,904 ಕೋಟಿ ದಾನ ಮಾಡಿದ್ದರು. ಪ್ರೇಮ್‌ಜಿ ಅವರಿಗೆ ಎಐಎಂಎ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.