ADVERTISEMENT

ಡಿ–ಮಾರ್ಟ್‌ ವರಮಾನ ಶೇ 36ರಷ್ಟು ಹೆಚ್ಚಳ

ಪಿಟಿಐ
Published 5 ಅಕ್ಟೋಬರ್ 2022, 10:08 IST
Last Updated 5 ಅಕ್ಟೋಬರ್ 2022, 10:08 IST

ನವದೆಹಲಿ: ಡಿ–ಮಾರ್ಟ್‌ ಮಳಿಗೆಗಳನ್ನು ನಿಯಂತ್ರಿಸುತ್ತಿರುವ ಅವೆನ್ಯು ಸೂಪರ್‌ಮಾರ್ಕೆಟ್ಸ್‌ ಲಿಮಿಟೆಡ್‌ನ ಕಾರ್ಯಾಚರಣಾ ವರಮಾನವು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ₹10,385 ಕೋಟಿಗೆ ತಲುಪಿದೆ.

ಹಿಂದಿನ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಾರ್ಯಾಚರಣಾ ವರಮಾನ ₹7,650 ಕೋಟಿ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ವರಮಾನವು ಶೇ 35.75ರಷ್ಟು ಹೆಚ್ಚಾಗಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ. ಸೆಪ್ಟೆಂಬರ್‌ ತ್ರೈಮಾಸಿಕದ ಅಂತ್ಯಕ್ಕೆ ಕಂಪನಿಯ ಒಟ್ಟು ಮಳಿಗೆಗಳ ಸಂಖ್ಯೆ 302ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT