ADVERTISEMENT

ಸುಸ್ತಿ ತಡೆಗೆ ಕಾಮತ್‌ ನೇತೃತ್ವದಲ್ಲಿ ಸಮಿತಿ

ಪಿಟಿಐ
Published 7 ಆಗಸ್ಟ್ 2020, 21:38 IST
Last Updated 7 ಆಗಸ್ಟ್ 2020, 21:38 IST
ಕೆ.ವಿ. ಕಾಮತ್
ಕೆ.ವಿ. ಕಾಮತ್   

ಮುಂಬೈ: ಕೊರೊನಾ ವೈರಾಣುವಿನ ಕಾರಣದಿಂದಾಗಿ ಕೆಲವು ಸಾಲಗಳು ಸುಸ್ತಿಯಾಗುವುದನ್ನು ತಡೆಯಲು ಕ್ರಮಗಳನ್ನು ಸೂಚಿಸುವಂತೆ ಕೋರಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕೆ.ವಿ. ಕಾಮತ್ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಿದೆ.

ಈ ಸಮಿತಿಯು ಮೂವತ್ತು ದಿನಗಳಲ್ಲಿ ತನ್ನ ಶಿಫಾರಸುಗಳನ್ನು ಸಲ್ಲಿಸಬೇಕಿದೆ. ದಿವಾಕರ್ ಗುಪ್ತ, ಟಿ.ಎನ್. ಮನೋಹರನ್, ಅಶ್ವಿನ್ ಪಾರೇಖ್ ಅವರು ಈ ಸಮಿತಿಯ ಸದಸ್ಯರಾಗಿ ಇರಲಿದ್ದಾರೆ.

ಭಾರತೀಯ ಬ್ಯಾಂಕ್‌ಗಳ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಈ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿರಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.