ADVERTISEMENT

ರಕ್ಷಣಾ ಉಪಕರಣ ತಯಾರಿಕೆ: ಹೊಸ ಪರಿಕಲ್ಪನೆಗೆ ಅನುದಾನ -ಜಿ.ಸತೀಶ್‌ ರೆಡ್ಡಿ

ರಕ್ಷಣಾ ವಲಯದ ಉಪಕರಣಗಳ ತಯಾರಿಕಾ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 19:45 IST
Last Updated 12 ನವೆಂಬರ್ 2022, 19:45 IST
ಹುಬ್ಬಳ್ಳಿಯ ಬಿ.ವಿ.ಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಶನಿವಾರ ನಡೆದ ‘ಡಿಫೆನ್ಸ್‌ ಟೆಕ್‌ಕನೆಕ್ಟ್‌’ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಸತೀಶ್‌ ರೆಡ್ಡಿ ಮಾತನಾಡಿದರು
ಹುಬ್ಬಳ್ಳಿಯ ಬಿ.ವಿ.ಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಶನಿವಾರ ನಡೆದ ‘ಡಿಫೆನ್ಸ್‌ ಟೆಕ್‌ಕನೆಕ್ಟ್‌’ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಸತೀಶ್‌ ರೆಡ್ಡಿ ಮಾತನಾಡಿದರು   

ಹುಬ್ಬಳ್ಳಿ: ‘ಯುವ ತಂತ್ರಜ್ಞರು ತಮ್ಮ ಬಳಿಯಿರುವ ಹೊಸ ಆಲೋಚನೆಗಳು, ಪರಿಕಲ್ಪನೆಗಳನ್ನು ಡಿಆರ್‌ಡಿಒ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿದರೆ, ಅತ್ಯುತ್ತಮವಾಗಿದ್ದರೆ ಅವುಗಳಿಗೆ ಟೆಕ್ನಾಲಜಿ ಡೆವಲಪ್‌ಮೆಂಟ್‌ ಫಂಡ್‌ (ಟಿಡಿಎಫ್‌) ಅಡಿ ಅನುದಾನ ಸಿಗಲಿದೆ’ ಎಂದು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಜಿ.ಸತೀಶ್‌ ರೆಡ್ಡಿ ಮಾಹಿತಿ ನೀಡಿದರು.

ಇಲ್ಲಿನ ಬಿ.ವಿ.ಬಿ ಕಾಲೇಜಿನಲ್ಲಿ ಶನಿವಾರ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಆಯೋಜಿಸಿದ್ದ ಡಿಫೆನ್ಸ್‌ ಟೆಕ್‌ ಕನೆಕ್ಟ್‌ ಸಮ್ಮೇಳನದಲ್ಲಿ ‘ಆತ್ಮನಿರ್ಭರ ಭಾರತದಲ್ಲಿ ಸ್ಟಾರ್ಟ್‌ಅಪ್ಸ್‌ ಹಾಗೂ ಎಂಎಸ್‌ಎಂಇ ಪಾತ್ರ’ ಕುರಿತು ಉಪನ್ಯಾಸ ನೀಡಿದರು. ‘ತಯಾರಕರಿಗೆ ಉತ್ತೇಜನ ನೀಡಲುಟಿಡಿಎಫ್‌ ಮೂಲಕ ₹ 50 ಕೋಟಿವರೆಗೆ ಅನುದಾನ ನೀಡಲಾಗುತ್ತಿದೆ. ಈಗಾಗಲೇ 60 ನವೋದ್ಯಮಗಳು ಪ್ರಯೋಜನ ಪಡೆದುಕೊಂಡಿವೆ. ರಕ್ಷಣಾ ವಲಯದ ಉಪಕರಣಗಳ ತಯಾರಿಕೆಯಲ್ಲಿ ನವೋದ್ಯಮಗಳು ಮತ್ತು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ವಿಪುಲ ಅವಕಾಶಗಳಿವೆ.

‘ಡಿಆರ್‌ಡಿಒ ಸಹಯೋಗದಲ್ಲಿ ದೇಶದಲ್ಲಿ 20 ಸಾವಿರ ನವೋದ್ಯಮಗಳು ರಕ್ಷಣಾ ವಲಯದ ಉಪಕರಣಗಳನ್ನು ತಯಾರಿಸುವಲ್ಲಿ ತೊಡಗಿವೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಕಡಿಮೆ ವೆಚ್ಚದಲ್ಲಿ ತಯಾರಿಸುತ್ತಿವೆ. ಖಾಸಗಿ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ದೇಶೀಯ ರಕ್ಷಣಾ ಸಂಸ್ಥೆಗಳನ್ನೇ ಅವಲಂಬಿಸಬೇಕಾಗಿಲ್ಲ. ವಿದೇಶಗಳಿಗೂ ರಫ್ತು ಮಾಡಬಹುದು’ ಎಂದರು. ವಿಶ್ವವಿದ್ಯಾಲಯದ ಡೀನ್‌ ಡಾ.ಪಿ.ಜಿ. ತಿವಾರಿ, ಸಿಟಿಎಫ್‌ ನಿರ್ದೇಶಕ ಶಿವಯೋಗಿ ತುರಮರಿ, ಡಾ.ಉಮಾ ಮುದೇನಗುಡಿ, ಪ್ರೊ.ಬಿ.ಎಲ್‌. ದೇಸಾಯಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.