ADVERTISEMENT

ಡೆಲಿವರಿ ಸೇವೆ ಬೆಂಳೂರಿನಲ್ಲಿ ಆರಂಭ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 15:37 IST
Last Updated 20 ಜೂನ್ 2025, 15:37 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ನಗರದೊಳಗಿನ ಸರಕು ಸಾಗಣೆ ಸೇವೆಯನ್ನು ದೆಹಲಿ ಮತ್ತು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ ಎಂದು ಸರಕು ಸಾಗಣೆ ಕ್ಷೇತ್ರದ ಡೆಲಿವರಿ ಕಂಪನಿಯು ಶುಕ್ರವಾರ ತಿಳಿಸಿದೆ.

ಈ ಸೇವೆಯನ್ನು ಮೊದಲು ಅಹಮದಾಬಾದ್‌ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಇದೀಗ ಈ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದೆ.

ಡೆಲಿವರಿ ಡೈರೆಕ್ಟ್ ಅಪ್ಲಿಕೇಶನ್ ಗೂಗಲ್ ಪ್ಲೇ ಮತ್ತು ಆ್ಯಪಲ್‌ ಆ್ಯಪ್‌ ಸ್ಟೋರ್‌ಗಳಲ್ಲಿ ಲಭ್ಯವಿದೆ. ಸ್ಥಳೀಯ ವಿತರಣೆಗಳಿಗಾಗಿ ಗ್ರಾಹಕರು ಈ ಅಪ್ಲಿಕೇಷನ್‌ ಬಳಸಿಕೊಂಡು 15 ನಿಮಿಷದೊಳಗೆ ಸೇವೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದೆ.   

ADVERTISEMENT

‘ಲಕ್ಷಾಂತರ ಗ್ರಾಹಕರು ಮತ್ತು ಸಣ್ಣ, ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ತ್ವರಿತ, ಕೈಗೆಟಕುವ ಮತ್ತು ವಿಶ್ವಾಸಾರ್ಹವಾದ ಸಾಗಣೆ ಸೇವೆಯನ್ನು ಒದಗಿಸಲಾಗುವುದು’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಾಹಿಲ್ ಬರುವಾ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.