ನವದೆಹಲಿ: ಜೊಮ್ಯಾಟೊ ಡೆಲಿವರಿ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದ ಸಲೀಲ್ ತ್ರಿಪಾಠಿ ಅವರ ಪತ್ನಿ ಸುಚೇತಾ ತ್ರಿಪಾಠಿ ಅವರಿಗೆ ಉದ್ಯೋಗ ನೀಡುವುದಾಗಿ ಜೊಮ್ಯಾಟೊ ಕಂಪನಿ ತಿಳಿಸಿದೆ. ಸಲೀಲ್ ಅವರು ಹಿಂದಿನ ವಾರ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು.
ಸುಚೇತಾ ಅವರಿಗೆ ವಿಮಾ ಪರಿಹಾರ ಮೊತ್ತವಾಗಿ ₹ 10 ಲಕ್ಷ, ಜೊಮ್ಯಾಟೊ ಸಿಬ್ಬಂದಿ ಒಗ್ಗೂಡಿಸಿ ನೀಡಿರುವ ₹ 12 ಲಕ್ಷವನ್ನು ಕೂಡ ನೀಡಲಾಗುವುದು ಎಂದು ಕಂಪನಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.