ADVERTISEMENT

‘ದಿಗಂತರಾ’ದಿಂದ ₹450 ಕೋಟಿ ಸಿರೀಸ್‌ ಬಿ ಬಂಡವಾಳ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 15:38 IST
Last Updated 18 ಡಿಸೆಂಬರ್ 2025, 15:38 IST
<div class="paragraphs"><p>ದಿಗಂತರಾ</p></div>

ದಿಗಂತರಾ

   

ಬೆಂಗಳೂರು: ಬಾಹ್ಯಾಕಾಶ ಕಣ್ಗಾವಲು ಮತ್ತು ಗುಪ್ತಚರ ಕ್ಷೇತ್ರದ ಕಂಪನಿ ‘ದಿಗಂತರಾ ಇಂಡಸ್ಟ್ರೀಸ್’ ಸಿರೀಸ್–ಬಿ ಮೂಲಕ ಒಟ್ಟು 50 ಮಿಲಿಯನ್ ಡಾಲರ್ (ಅಂದಾಜು ₹450 ಕೋಟಿ) ಬಂಡವಾಳ ಸಂಗ್ರಹಿಸಿರುವುದಾಗಿ ಹೇಳಿದೆ.

360 ಒನ್‌ ಅಸೆಟ್‌, ಎಸ್‌ಬಿಐ ಇನ್ವೆಸ್ಟ್‌ಮೆಂಟ್ಸ್‌ ಜಪಾನ್, ರೋನಿ ಸ್ಕ್ರೂವಾಲಾ ಸೇರಿದಂತೆ ಹಲವರು ಹೂಡಿಕೆ ಮಾಡಿದ್ದಾರೆ. ಈಗಾಗಲೇ ಕಂಪನಿಯಲ್ಲಿ ಹಣ ತೊಡಗಿಸಿರುವ ಪೀಕ್‌ ಎಕ್ಸ್‌ವಿ ಪಾರ್ಟ್ನರ್ಸ್‌ ಮತ್ತು ಕಲಾರಿ ಕ್ಯಾಪಿಟಲ್ ಕೂಡ ಹೊಸದಾಗಿ ಬಂಡವಾಳ ತೊಡಗಿಸಿವೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಕಂಪನಿಯು ಈ ಬಂಡವಾಳವನ್ನು ಭಾರತ ಮತ್ತು ಅಮೆರಿಕದ ಆಚೆಗೆ ತನ್ನ ಚಟುವಟಿಕೆಗಳನ್ನು ವಿಸ್ತರಿಸಲು, ಉಪಗ್ರಹಗಳ ತಯಾರಿಕೆಗೆ ಹೊಸ ತಯಾರಿಕಾ ಸೌಲಭ್ಯಗಳಿಗೆ ಮತ್ತು ಮುಂಬರುವ ವರ್ಷಗಳಲ್ಲಿ ಜಾಗತಿಕವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ತಂಡಗಳನ್ನು ಹೆಚ್ಚಿಸಲು ಬಳಸಲಿದೆ.

ದಿಂಗತರಾ ಈಗ ಸಂಪೂರ್ಣ ‘ಬಾಹ್ಯಾಕಾಶ ಕಣ್ಗಾವಲು ಮತ್ತು ಗುಪ್ತಚರ ಕಂಪನಿ’ಯಾಗಿ ಪರಿವರ್ತನೆ ಕಾಣುತ್ತಿದೆ. ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಸ್ವದೇಶಿ ಯಂತ್ರಾಂಶ, ತಂತ್ರಾಂಶ ಮತ್ತು ಗುಪ್ತಚರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.