ADVERTISEMENT

ಷೇರು ವಿಕ್ರಯ ಗುರಿ ಇಳಿಕೆ?

ಏರ್‌ ಇಂಡಿಯಾ, ಬಿಪಿಸಿಎಲ್‌ ಮಾರಾಟಕ್ಕೆ ಹಿನ್ನಡೆ

ಅನ್ನಪೂರ್ಣ ಸಿಂಗ್
Published 4 ಜನವರಿ 2020, 17:58 IST
Last Updated 4 ಜನವರಿ 2020, 17:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಕಂಪನಿಗಳ ಷೇರು ಮಾರಾಟ ಪ್ರಕ್ರಿಯೆಗೆ ಹಿನ್ನಡೆ ಆಗಿದೆ. ಹೀಗಾಗಿ ಕೇಂದ್ರ ಸರ್ಕಾರ, ಪ್ರಸಕ್ತ ಹಣಕಾಸು ವರ್ಷಕ್ಕೆ ನಿಗದಿ ಪಡಿಸಿರುವ ₹ 1.05 ಲಕ್ಷ ಕೋಟಿ ಮೊತ್ತದ ಷೇರು ವಿಕ್ರಯದ ಗುರಿಯಲ್ಲಿ ₹ 40 ಸಾವಿರ ಕೋಟಿಗಳಷ್ಟು ಇಳಿಕೆ ಮಾಡುವ ಸಾಧ್ಯತೆ ಇದೆ.

ಫೆಬ್ರುವರಿ 1ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಷೇರು ವಿಕ್ರಯದ ಗುರಿ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ಅತಿದೊಡ್ಡ ಕಂಪನಿಗಳಾದ ಏರ್‌ ಇಂಡಿಯಾ ಮತ್ತು ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿ. (ಬಿಪಿಸಿಎಲ್‌) ಷೇರುಗಳ ವಿಕ್ರಯಕ್ಕೆ ಹೂಡಿಕೆದಾರರಿಂದ ಉತ್ತಮ ಸ್ಪಂದನೆ ದೊರೆತಿಲ್ಲ. ಇದು ಸರ್ಕಾರದ ಷೇರು ವಿಕ್ರಯದ ಮೇಲೆಯೂ ಅತಿ ಹೆಚ್ಚಿನ ಹೊಡೆತ ಬೀಳುವಂತೆ ಮಾಡಿದೆ.

ADVERTISEMENT

ಇದುವರೆಗೆ ಸರ್ಕಾರವು, ಷೇರು ವಿಕ್ರಯದ ಮೂಲಕ ₹ 18 ಸಾವಿರ ಕೋಟಿಯನ್ನಷ್ಟೇ ಸಂಗ್ರಹಿಸಿದೆ. ಇದಲ್ಲದೆ,
ಕೋಲ್‌ ಇಂಡಿಯಾ, ಎನ್‌ಟಿಪಿಸಿ,ಎನ್‌ಎಂಡಿಸಿ, ಒಳಗೊಂಡು ಪ್ರಮುಖ 10 ಕಂಪನಿಗಳ ಷೇರುಗಳ ಮಾರಾಟ ಕೊಡುಗೆಯ ಮೂಲಕ ₹ 39 ಸಾವಿರ ಕೋಟಿಗಳಿಂದ ₹ 40 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ. ಇವುಗಳಲ್ಲಿ ಶೇ 82ರವರೆಗೂ ಷೇರುಪಾಲು ಹೊಂದಿದೆ.

ಬಜೆಟ್‌ ಅಂದಾಜಿನಂತೆ ಷೇರು ವಿಕ್ರಯದ ಗುರಿ ಸಾಧನೆ ಕಷ್ಟ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರುಕಟ್ಟೆಯ ಸ್ಥಿತಿ ಪೂರಕವಾಗಿ ಇಲ್ಲದೇ ಇರುವುದರಿಂದ ಬಿಪಿಸಿಎಲ್‌ ಮಾರಾಟಕ್ಕೆ ಅಡ್ಡಿಯಾಗಿದೆ. 2020ರ ಮಾರ್ಚ್‌ಗೂ ಮೊದಲೇ ಎರಡೂ ಕಂಪನಿಗಳ ಷೇರು ಮಾರಾಟ ನಡೆಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿಶ್ವಾಸವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.