ADVERTISEMENT

ಡಾಲರ್ ಇಂಡಸ್ಟ್ರೀಸ್‌ಗೆ ಲಾಭ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 4:52 IST
Last Updated 2 ನವೆಂಬರ್ 2021, 4:52 IST
   

ಬೆಂಗಳೂರು: ಡಾಲರ್ ಇಂಡಸ್ಟ್ರೀಸ್‌ ಕಂಪನಿಯು ತನ್ನ ಸೆಪ್ಟೆಂಬರ್‌ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, ಕಂಪನಿಯು ₹ 41.24 ಕೋಟಿ ಲಾಭ ಗಳಿಸಿದೆ.

ಕಂಪನಿಯ ಕಾರ್ಯಾಚರಣೆ ಆದಾಯವು ₹ 390 ಕೋಟಿ ಆಗಿದೆ ಎಂದು ಪ್ರಕಟಣೆ ತಿಳಿಸಿದೆ. ‘ಅಕ್ಟೋಬರ್‌ ತಿಂಗಳಿನಲ್ಲಿ ನಾವು ನಮ್ಮ ಕಂಪನಿಯ ಮೊದಲ ಮಳಿಗೆಯನ್ನು ಅಯೋಧ್ಯೆಯಲ್ಲಿ ಆರಂಭಿಸಿದ್ದೇವೆ. ಇದೇ ಮಾದರಿಯಲ್ಲಿ ದೇಶದ ಎಲ್ಲ ಕಡೆ ಮಳಿಗೆ ಆರಂಭಿಸುವ ಉದ್ದೇಶ ಹೊಂದಿದ್ದೇವೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಕುಮಾರ ಗುಪ್ತ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT