ಸಾಂದರ್ಭಿಕ ಚಿತ್ರ
ಎ.ಐ ಚಿತ್ರ
ನವದೆಹಲಿ: ದೇಶೀಯ ವಿಮಾನ ಮಾರ್ಗದಲ್ಲಿ ಪ್ರಯಾಣಿಕರ ಸಂಚಾರ ಜುಲೈ ತಿಂಗಳಿನಲ್ಲಿ ಶೇ 2.94ರಷ್ಟು ಇಳಿಕೆಯಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
2024ರ ಜುಲೈನಲ್ಲಿ 1.29 ಕೋಟಿ ಪ್ರಯಾಣಿಕರು ಸಂಚಾರ ಮಾಡಿದ್ದರು. ಇದು ಈ ಬಾರಿ 1.26 ಕೋಟಿಯಷ್ಟಾಗಿದೆ ಎಂದು ತಿಳಿಸಿದೆ.
ಜೂನ್ 12ರಂದು ನಡೆದ ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಪ್ರಯಾಣಿಕರ ಸಂಚಾರದಲ್ಲಿ ಇಳಿಕೆ ಆಗಿದೆ.
ಏರ್ ಇಂಡಿಯಾ ಸಮೂಹವು ಶೇ 1ರಷ್ಟು ಮಾರುಕಟ್ಟೆಯನ್ನು ಕಳೆದುಕೊಂಡಿದೆ. ಇದೇ ಅವಧಿಯಲ್ಲಿ ಇಂಡಿಗೊ ವಿಮಾನದ ಮಾರುಕಟ್ಟೆ ಪಾಲು ಶೇ 64.5ರಿಂದ ಶೇ 65.2ಕ್ಕೇರಿದೆ. ಆಕಾಸಾ ಏರ್ ಮತ್ತು ಸ್ಪೈಸ್‌ಜೆಟ್ ಮಾರುಕಟ್ಟೆ ಪಾಲು ಕ್ರಮವಾಗಿ ಶೇ 5.5 ಮತ್ತು ಶೇ 2ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಜುಲೈನಲ್ಲಿ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ, ಬೆಂಗಳೂರು ಮತ್ತು ಹೈದರಾಬಾದ್‌ನ ವಿಮಾನ ನಿಲ್ದಾಣಗಳಿಂದ ಎಲ್ಲಾ ದೇಶೀಯ ವಿಮಾನಯಾನ ಸಂಸ್ಥೆಗಳ ಪೈಕಿ ಇಂಡಿಗೊ ಶೇ 91.4ರಷ್ಟು ಅತ್ಯುತ್ತಮ ಕಾರ್ಯಕ್ಷಮತೆ ನೀಡಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.