ADVERTISEMENT

ಜರ್ಮನಿಯಲ್ಲಿ ಆರ್ಥಿಕ ಹಿಂಜರಿತ; ರಫ್ತಿನ ಮೇಲೆ ಪರಿಣಾಮ ಸಾಧ್ಯತೆ

ಪಿಟಿಐ
Published 28 ಮೇ 2023, 16:04 IST
Last Updated 28 ಮೇ 2023, 16:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ : ಜರ್ಮನಿಯು ಆರ್ಥಿಕ ಹಿಂಜರಿತಕ್ಕೆ ಜಾರಿರುವ ಪರಿಣಾಮವಾಗಿ, ಭಾರತದಿಂದ ಆ ದೇಶಕ್ಕೆ ರಾಸಾಯನಿಕಗಳು, ಯಂತ್ರಗಳು, ಬಟ್ಟೆ ಮತ್ತು ಎಲೆಕ್ಟ್ರಾನಿಕ್ಸ್‌ ವಲಯಗಳಿಂದ ಆಗುವ ರಫ್ತಿನ ಮೇಲೆ ಪರಿಣಾಮ ಉಂಟಾಗಬಹುದು ಎಂದು ಭಾರತೀಯ ಕೈಗಾರಿಕಾ ಮಹಾಸಂಘದ (ಸಿಐಐ) ಆಮದು ಮತ್ತು ರಫ್ತು ಸಮಿತಿಯ ಅಧ್ಯಕ್ಷ ಸಂಜಯ್ ಬುಧಿಯಾ ಹೇಳಿದ್ದಾರೆ.

ವಿಶ್ವದ ನಾಲ್ಕನೆಯ ಅತಿದೊಡ್ಡ ಅರ್ಥ ವ್ಯವಸ್ಥೆಯನ್ನು ಹೊಂದಿರುವ ಜರ್ಮನಿಯು ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ. ‘2022ರಲ್ಲಿ ಭಾರತದ ಒಟ್ಟು ರಫ್ತಿನಲ್ಲಿ ಜರ್ಮನಿಯ ಪಾಲು ಶೇ 4.4ರಷ್ಟು ಇತ್ತು. ಆರ್ಥಿಕ ಹಿಂಜರಿತದ ಪರಿಣಾಮವು ಭಾರತದ ರಫ್ತುಗಳ ಮೇಲೆ ಎಷ್ಟರಮಟ್ಟಿಗೆ ಇರಲಿದೆ ಎಂಬುದನ್ನು ಹೇಳಲು ಕಾಲ ಇನ್ನೂ ಪಕ್ವವಾಗಿಲ್ಲ’ ಎಂದು ಅವರು ಹೇಳಿದ್ದಾರೆ.

ಆರ್ಥಿಕ ಹಿಂಜರಿತವು ಜರ್ಮನಿಯಿಂದ ಭಾರತಕ್ಕೆ ಬರುವ ಹೂಡಿಕೆಗಳ ಮೇಲೆಯೂ ಪರಿಣಾಮ ಉಂಟುಮಾಡಬಹುದು ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.