
ಪಿಟಿಐ
ಅನಿಲ್ ಅಂಬಾನಿ
–ಪಿಟಿಐ ಚಿತ್ರ
ನವದೆಹಲಿ: ರಿಲಯನ್ಸ್ ಸಮೂಹದ ಮುಖ್ಯಸ್ಥ ಅನಿಲ್ ಅಂಬಾನಿ ಅವರ ಒಡೆತನದ ₹3,716 ಕೋಟಿ ಮೌಲ್ಯದ ಐಷಾರಾಮಿ ನಿವಾಸವನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ಮೂಲಗಳು ಬುಧವಾರ ತಿಳಿಸಿವೆ.
ಅನಿಲ್ ಅಂಬಾನಿ ಅವರ ಸಮೂಹ ಸಂಸ್ಥೆಗಳ ಪೈಕಿ ಒಂದಾಗಿರುವ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಂ) ವಿರುದ್ಧದ ಬ್ಯಾಂಕ್ ಸಾಲದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇ.ಡಿ ಈ ಕ್ರಮ ಕೈಗೊಂಡಿದೆ.
ಮುಂಬೈನ ಪಲಿ ಹಿಲ್ ಪ್ರದೇಶದಲ್ಲಿರುವ 17 ಅಂತಸ್ತಿನ ನಿವಾಸವನ್ನು ಜಪ್ತಿ ಮಾಡಲಾಗಿದೆ ಎಂದೂ ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಜಪ್ತಿ ಮಾಡಲಾದ ಆಸ್ತಿಯ ಮೌಲ್ಯ ₹15,700 ಕೋಟಿಗೆ ತಲುಪಿದೆ ಎಂದೂ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.