ADVERTISEMENT

ಮೂಲಸೌಕರ್ಯದ ಬೆಳವಣಿಗೆ ಕುಂಠಿತ

ಪಿಟಿಐ
Published 30 ಜೂನ್ 2020, 21:17 IST
Last Updated 30 ಜೂನ್ 2020, 21:17 IST
ನಿರ್ಮಾಣ ಕಾಮಗಾರಿ (ಸಾಂದರ್ಭಿಕ ಚಿತ್ರ)
ನಿರ್ಮಾಣ ಕಾಮಗಾರಿ (ಸಾಂದರ್ಭಿಕ ಚಿತ್ರ)   

ನವದೆಹಲಿ: ಲಾಕ್‌ಡೌನ್‌ನಿಂದಾಗಿ ದೇಶದ ಮೂಲಸೌಕರ್ಯ ವಲಯದ ಬೆಳವಣಿಗೆಯು ಮೇನಲ್ಲಿ ಶೇ 23.4ರಷ್ಟು ಕುಸಿತ ಕಂಡಿದೆ.

2019ರ ಮೇನಲ್ಲಿ ಶೇ 3.8ರಷ್ಟು ಬೆಳವಣಿಗೆ ಕಂಡಿತ್ತು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ರಸಗೊಬ್ಬರ ತಯಾರಿಕೆ ಹೊರತುಪಡಿಸಿ ಉಳಿದೆಲ್ಲಾ ವಲಯಗಳ ಬೆಳವಣಿಗೆಯು ನಕಾರಾತ್ಮಕ ಮಟ್ಟದಲ್ಲಿದೆ.

ADVERTISEMENT

2020–21ರ ಏಪ್ರಿಲ್‌–ಮೇ ಅವಧಿಯಲ್ಲಿ ಈ ವಲಯದ ಬೆಳವಣಿಗೆ ಶೇ 30ರಷ್ಟು ಕುಸಿತ ಕಂಡಿದೆ. 2019–20ರ ಇದೇ ಅವಧಿಯಲ್ಲಿ ಶೇ 4.5ರಷ್ಟು ಬೆಳವಣಿಗೆ ಕಂಡಿತ್ತು.

ಏಪ್ರಿಲ್‌ ಮತ್ತು ಮೇನಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ಕಲ್ಲಿದ್ದಲು, ಸಿಮೆಂಟ್‌, ಉಕ್ಕು, ನೈಸರ್ಗಿಕ ಅನಿಲ, ತೈಲ ಸಂಸ್ಕರಣಾಗಾರ, ಕಚ್ಚಾತೈಲ ವಲಯಗಳು ಉತ್ಪಾದನಾ ನಷ್ಟ ಅನುಭವಿಸಿವೆ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವಲಯಗಳು ಕೈಗಾರಿಕಾ ಉತ್ಪಾದನಾ ಸೂಚ್ಯಂಕಕ್ಕೆ (ಐಐಪಿ) ಶೇ 40.27ರಷ್ಟು ಕೊಡುಗೆ ನೀಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.