ADVERTISEMENT

ಓಲಾ ಸ್ಕೂಟರ್: ಎರಡು ದಿನಗಳ ಮಾರಾಟದ ಮೊತ್ತ ₹ 1,100 ಕೋಟಿ!

ಪಿಟಿಐ
Published 17 ಸೆಪ್ಟೆಂಬರ್ 2021, 12:08 IST
Last Updated 17 ಸೆಪ್ಟೆಂಬರ್ 2021, 12:08 IST

ನವದೆಹಲಿ: ಓಲಾ ಕಂಪನಿಯ ಎಸ್‌1 ವಿದ್ಯುತ್ ಚಾಲಿತ ಸ್ಕೂಟರ್‌ಗಳ ಮಾರಾಟವು ಎರಡು ದಿನಗಳಲ್ಲಿ ₹ 1,100 ಕೋಟಿ ಮೊತ್ತವನ್ನು ದಾಟಿದೆ ಎಂದು ಕಂಪನಿಯ ಸಹ ಸಂಸ್ಥಾಪಕ ಭವೀಶ್ ಅಗರ್ವಾಲ್ ಶುಕ್ರವಾರ ಹೇಳಿದ್ದಾರೆ.

ಈ ಸ್ಕೂಟರ್‌ಗಳನ್ನು ಖರೀದಿಸಲು ನವೆಂಬರ್ 1ರಿಂದ ಮತ್ತೆ ಅವಕಾಶ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ಮಾದರಿಗಳ ಮಾರಾಟವನ್ನು ಕಂಪನಿಯು ಬುಧವಾರದಿಂದ ಆರಂಭಿಸಿತ್ತು. ಕಂಪನಿಯು ಮೊದಲ ದಿನ ₹ 600 ಕೋಟಿ ಮೌಲ್ಯದ ಸ್ಕೂಟರ್‌ಗಳನ್ನು ಮಾರಾಟ ಮಾಡಿತು.

‘ಎರಡು ದಿನಗಳಲ್ಲಿ ₹ 1,100 ಕೋಟಿಗೂ ಹೆಚ್ಚಿನ ಮೌಲ್ಯದ ಸ್ಕೂಟರ್‌ಗಳನ್ನು ಮಾರಾಟ ಮಾಡಲಾಗಿದೆ. ಇದು ಆಟೊಮೊಬೈಲ್‌ ಉದ್ಯಮದಲ್ಲಿ ಹಿಂದೆಂದೂ ಸಾಧ್ಯವಾಗಿರಲಿಲ್ಲ. ಅಷ್ಟೇ ಅಲ್ಲ, ದೇಶದ ಇ–ವಾಣಿಜ್ಯ ಉದ್ದಿಮೆಯಲ್ಲಿ ಒಂದು ದಿನದಲ್ಲಿ ಮೌಲ್ಯದ ಲೆಕ್ಕದಲ್ಲಿ ಉತ್ಪನ್ನವೊಂದು ಕಂಡಿರುವ ಅತಿದೊಡ್ಡ ಮಾರಾಟವೂ ಹೌದು’ ಎಂದು ಅಗರ್ವಾಲ್ ಹೇಳಿದ್ದಾರೆ.

ADVERTISEMENT

ಸ್ಕೂಟರ್‌ಗಳನ್ನು ಗ್ರಾಹಕರಿಗೆ ತಲುಪಿಸುವ ಕೆಲಸವು ಅಕ್ಟೋಬರ್‌ 21ರಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.