ADVERTISEMENT

ಎಂಎಸ್‌ಎಂಇಗಳಿಗೆ ಸಾಲಖಾತರಿ ಯೋಜನೆ ಕೊಡುಗೆ

ಪಿಟಿಐ
Published 28 ಮೇ 2020, 20:30 IST
Last Updated 28 ಮೇ 2020, 20:30 IST
-
-   

ನವದೆಹಲಿ: ಕೋವಿಡ್‌ನಿಂದ ತೀವ್ರವಾಗಿ ಬಾಧಿತಗೊಂಡಿರುವ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಸರ್ಕಾರ ಪ್ರಕಟಿಸಿರುವ ₹ 3 ಲಕ್ಷ ಕೋಟಿ ಮೊತ್ತದ ಸಾಲ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸಲು ರಾಷ್ಟ್ರೀಯ ಸಾಲ ಖಾತರಿ ಟ್ರಸ್ಟಿ ಕಂಪನಿ (ಎನ್‌ಸಿಜಿಟಿಸಿ) ಕಾರ್ಯಪ್ರವೃತ್ತವಾಗಿದೆ.

ಸಾಲ ನೀಡಲು ಸಮ್ಮತಿಸಿದ ಪ್ರಕರಣಗಳಲ್ಲಿ ‘ಎಂಎಸ್‌ಎಂಇ’ಗಳಿಗೆ ಮಂಜೂರು ಮಾಡುವ ಸಾಲಕ್ಕೆ ‘ಎನ್‌ಸಿಜಿಟಿಸಿ’ಯು, ಬ್ಯಾಂಕ್‌, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಶೇ 100ರಷ್ಟು ಸಾಲ ಮರುಪಾವತಿಯ ಖಾತರಿ ನೀಡಲಿದೆ.

ಆರ್ಥಿಕ ಉತ್ತೇಜನಾ ಕೊಡುಗೆಯಡಿ ಕೇಂದ್ರ ಸರ್ಕಾರ ಪ್ರಕಟಿಸಿರುವ, ಸಾಲ ಮರುಪಾವತಿ ಖಾತರಿ ಯೋಜನೆಯ ಅರ್ಹ ‘ಎಂಎಸ್‌ಎಂಇ’ಗಳಿಗೆ ಬ್ಯಾಂಕ್‌ಗಳು ಸಾಲ ನೀಡುವುದಕ್ಕೆ ಈಗ ಹಾದಿ ಸುಗಮವಾಗಿದೆ.

ADVERTISEMENT

ಹೆಚ್ಚುವರಿ ದುಡಿಯುವ ಬಂಡವಾಳದ ಅವಧಿ ಸಾಲದ ರೂಪದಲ್ಲಿ ಈ ಸಾಲ ಸೌಲಭ್ಯದ ಕೊಡುಗೆ ಇರಲಿದೆ. ಉದ್ದಿಮೆ – ವಹಿವಾಟು ಪುನರಾರಂಭಿಸಲು ಈ ಸಾಲ ನೆರವಾಗಲಿದೆ. ಅರ್ಹ ‘ಎಂಎಸ್‌ಎಂಇ’ಗಳು ಈ ಕೊಡುಗೆ ಒಪ್ಪಿಕೊಂಡರೆ ಅಗತ್ಯ ದಾಖಲೆ ಪತ್ರಗಳನ್ನು ಒದಗಿಸಬೇಕಾಗುತ್ತದೆ. ಅರ್ಹ ಸಾಲಗಾರರು ಈ ಕೊಡುಗೆ ಪಡೆದುಕೊಳ್ಳಲು ಆಸಕ್ತಿ ತೋರಿಸದಿದ್ದರೆ ಅದನ್ನು ಬ್ಯಾಂಕ್‌ ಗಮನಕ್ಕೆ ತರಬೇಕಾಗುತ್ತದೆ.

ಅಂಕಿ ಅಂಶ

ಬಡ್ಡಿ ದರಕ್ಕೆ ಮಿತಿ

9.25 %: ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಗೆ

14 %: ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ

ಸಾಲ ಮರುಪಾವತಿಯ 1 ವರ್ಷದ ಬಿಡುವಿನ ಅವಧಿಯಲ್ಲಿ ಬಡ್ಡಿ ಪಾವತಿಸಬೇಕು

***

ಮರುಪಾವತಿ

4 ವರ್ಷ: ಸಾಲ ಮರುಪಾವತಿ ಅವಧಿ

1 ವರ್ಷ: ಅಸಲು ಪಾವತಿಗೆ ಬಿಡುವು

36 ತಿಂಗಳು: ಅಸಲು ಮರು ಪಾವತಿ ಅವಧಿ

ಸಾಲದ ಪೂರ್ವ ಪಾವತಿಗೆ ದಂಡ ವಿಧಿಸುವುದಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.