
ಪಿಟಿಐ
ಮುಂಬೈ: ಬ್ರೆಜಿಲ್‌ನ ವಿಮಾನ ತಯಾರಿಕಾ ಕಂಪನಿ ಎಂಬ್ರೇರ್ ಮತ್ತು ಭಾರತದ ಮಹೀಂದ್ರ ಸಮೂಹವು ಸಿ–390 ಮಿಲೆನಿಯಂ ವಿಮಾನಗಳಿಗಾಗಿ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷಾ (ಎಂಆರ್‌ಒ) ಘಟಕವನ್ನು ದೇಶದಲ್ಲಿ ಸ್ಥಾಪಿಸುವುದಾಗಿ ಗುರುವಾರ ಘೋಷಿಸಿವೆ.
ಈ ಎಂಆರ್‌ಒ ಘಟಕ ಎಂಬ್ರೇರ್ ಮತ್ತು ಮಹೀಂದ್ರ ಸಮೂಹದ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿದೆ.
ಉದ್ದೇಶಿತ ಘಟಕವು ವಿಮಾನಗಳ ನಿರ್ವಹಣೆ, ತಪಾಸಣೆ, ಪರೀಕ್ಷೆ, ವಿಮಾನದ ಬಿಡಿಭಾಗಗಳ ದುರಸ್ತಿ, ಸಂಪೂರ್ಣ ನವೀಕರಣ ಸೇರಿದಂತೆ ವಿವಿಧ ಸೇವೆಗಳನ್ನು ನೀಡಲಿದೆ ಎಂದು ಎಂಬ್ರೇರ್ ತಿಳಿಸಿದೆ.
ಈ ಸಹಯೋಗವು ಭಾರತೀಯ ವಾಯಪಡೆಯ ಮಧ್ಯಮ ಗಾತ್ರದ ಸಾರಿಗೆ ವಿಮಾನ (ಎಂಟಿಎ) ಯೋಜನೆಗೆ ನೆರವು ನೀಡುವ ಗುರಿ ಹೊಂದಿದೆ. ಜೊತೆಗೆ ಸ್ಥಳೀಯವಾಗಿ ತಯಾರಿಕಾ ಘಟಕ ನಿರ್ಮಿಸುವ ಮೂಲಕ ‘ಮೇಕ್ ಇನ್ ಇಂಡಿಯಾ’ವನ್ನು ಸದೃಢಗೊಳಿಸಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.