ADVERTISEMENT

ಸುಪ್ರೀಂ ಕೋರ್ಟ್‌ ಕದ ತಟ್ಟಿದ ಫ್ಯೂಚರ್ ರಿಟೇಲ್ ನೌಕರರು

ರಾಯಿಟರ್ಸ್
Published 23 ನವೆಂಬರ್ 2021, 14:18 IST
Last Updated 23 ನವೆಂಬರ್ 2021, 14:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಫ್ಯೂಚರ್ ರಿಟೇಲ್ ಕಂಪನಿಯ ರಿಟೇಲ್‌ ವಹಿವಾಟಿನ ಆಸ್ತಿಗಳನ್ನು ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ‘ಫ್ಯೂಚರ್‌’ನ ನೌಕರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅಮೆಜಾನ್ ಕಂಪನಿಯು ಸಲ್ಲಿಸಿರುವ ಅರ್ಜಿಗಳ ಕಾರಣದಿಂದಾಗಿ, ಫ್ಯೂಚರ್ ಸಮೂಹಕ್ಕೆ ತನ್ನ ರಿಟೇಲ್ ವಹಿವಾಟುಗಳನ್ನು ರಿಲಯನ್ಸ್‌ಗೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ರಿಟೇಲ್ ವಹಿವಾಟುಗಳನ್ನು ರಿಲಯನ್ಸ್‌ಗೆ ಮಾರಾಟ ಮಾಡಲು ತೀರ್ಮಾನಿಸುವ ಮೂಲಕ ಫ್ಯೂಚರ್ ಸಮೂಹವು ತನ್ನ ಜೊತೆ ಮಾಡಿಕೊಂಡಿದ್ದ ಕೆಲವು ಒಪ್ಪಂದಗಳನ್ನು ಉಲ್ಲಂಘಿಸಿದೆ ಎಂದು ಅಮೆಜಾನ್ ವಾದಿಸಿದೆ.

ರಿಲಯನ್ಸ್ ಜೊತೆಗಿನ ಒಪ್ಪಂದವು ಕಾರ್ಯರೂಪಕ್ಕೆ ಬರದೇ ಇದ್ದರೆ ಫ್ಯೂಚರ್ ಸಮೂಹ ಆರ್ಥಿಕವಾಗಿ ಕುಸಿಯುತ್ತದೆ. ಆಗ, ಇಪ್ಪತ್ತೇಳುಸಾವಿರ ನೌಕರರ ಜೀವನೋಪಾಯಕ್ಕೆ ಪೆಟ್ಟು ಬೀಳುತ್ತದೆ. ಈ ನೌಕರರ ಕುಟುಂಬದ ಸದಸ್ಯರು ಬೀದಿಗೆ ಬೀಳುತ್ತಾರೆ ಎಂದು ಫ್ಯೂಚರ್ ಸಮೂಹದ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅರ್ಜಿಯಲ್ಲಿ ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.