ನವದೆಹಲಿ: ಪಿಎಫ್ ಖಾತೆಗೆ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡುವುದನ್ನು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು(ಇಪಿಎಫ್‌ಒ) ಸೆಪ್ಟೆಂಬರ್ 1ರವರೆಗೂ ತಡೆ ಹಿಡಿದಿದೆ. ಇದರಿಂದಾಗಿ ಉದ್ಯೋಗದಾತರಿಗೆ ತಮ್ಮ ಉದ್ಯೋಗಿಗಳ ಆಧಾರ್ ಸಂಖ್ಯೆಯನ್ನು ಪಿಫ್ ಖಾತೆಗೆ ಜೋಡಿಸಲು ಹೆಚ್ಚಿನ ಕಾಲಾವಕಾಶ ಸಿಕ್ಕಿದೆ.
ಇಪಿಎಫ್‌ಒ ಬಿಡುಗಡೆ ಮಾಡಿದ ಅಧಿಕೃತ ಸುತ್ತೋಲೆಯ ಪ್ರಕಾರ, ಯುಎಎನ್‌ನೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವ ಕೊನೆಯ ದಿನಾಂಕವನ್ನು 2021 ರ ಜೂನ್ 1 ರಿಂದ 2021 ರ ಸೆಪ್ಟೆಂಬರ್ 1 ರವರೆಗೆ ವಿಸ್ತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.