ADVERTISEMENT

ಇಪಿಎಫ್‌ ಬಡ್ಡಿ ದರ ಇಳಿಕೆ: ಶೇ 8.50 ನಿಗದಿ 

ಏಜೆನ್ಸೀಸ್
Published 5 ಮಾರ್ಚ್ 2020, 8:12 IST
Last Updated 5 ಮಾರ್ಚ್ 2020, 8:12 IST
ಇಪಿಎಫ್‌ಒ
ಇಪಿಎಫ್‌ಒ   

ನವದೆಹಲಿ: 2019–20ನೇ ಹಣಕಾಸು ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿಯ (ಇಪಿಎಫ್‌) ಬಡ್ಡಿ ದರವನ್ನು ಶೇ 8.50ಕ್ಕೆ ಇಳಿಕೆ ಮಾಡಲು ಇಪಿಎಫ್‌ಒನ ಕೇಂದ್ರೀಯ ಧರ್ಮದರ್ಶಿ ಮಂಡಳಿ (ಸಿಬಿಟಿ) ಸಭೆಯಲ್ಲಿ ಗುರುವಾರ ನಿರ್ಧರಿಸಲಾಗಿದೆ.

2018–19ನೇ ಸಾಲಿನಲ್ಲಿ ಶೇ 8.65ರಷ್ಟಿದ್ದ ಇಪಿಎಫ್‌ ಬಡ್ಡಿ ದರವನ್ನು 2019–20ನೇ ಸಾಲಿಗೆ ಶೇ 8.50ಕ್ಕೆ ಇಳಿಕೆ ಮಾಡಲಾಗಿದೆ ಎಂದು ಕಾರ್ಮಿಕ ಖಾತೆ ಸಚಿವ ಸಂತೋಷ್‌ ಗಂಗ್ವಾರ್‌ ಹೇಳಿದ್ದಾರೆ.

ಇಪಿಎಫ್‌ಒ ವಾರ್ಷಿಕ ಸಂಗ್ರಹದಲ್ಲಿ ಶೇ 85ರಷ್ಟು ಡೆಬ್ಟ್‌ (ಕಡಿಮೆ ಅಪಾಯ ಇರುವ) ಹೂಡಿಕೆಗಳಲ್ಲಿ ಹಾಗೂ ಶೇ 15ರಷ್ಟು ಈಕ್ವಿಟಿ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತದೆ. ಕಳೆದ ವರ್ಷ ಮಾರ್ಚ್‌ ಅಂತ್ಯಕ್ಕೆ ಇಪಿಎಫ್‌ಒ ಈಕ್ವಿಟಿಗಳಲ್ಲಿ ಒಟ್ಟು ₹74,324 ಕೋಟಿ ಹೂಡಿಕೆ ಮಾಡಿ, ಶೇ 14.74ರಷ್ಟು ಗಳಿಕೆ ಕಂಡಿದೆ.

ADVERTISEMENT

ಅಂಚೆ ಕಚೇರಿ ಸಣ್ಣ ಉಳಿತಾಯ ಮತ್ತು ಬ್ಯಾಂಕ್‌ ಬಡ್ಡಿ ಹಾಗೂ ಠೇವಣಿಗಳ ಬಡ್ಡಿ ದರಗಳು ಕಡಿಮೆಯಾಗಿದ್ದು, ಅದಕ್ಕೆ ಅನುಗುಣವಾಗಿ ಪ್ರಸಕ್ತ ಹಣಕಾಸು ವರ್ಷದ ಇಪಿಎಫ್‌ ಬಡ್ಡಿ ದರ ಶೇ 8.5ಕ್ಕೆ ತಗ್ಗಿಸಲು ನಿರ್ಧರಿಸಲಾಗಿದೆ.

ಬಡ್ಡಿ ದರದ ವಿವರ
ವರ್ಷ; ಬಡ್ಡಿ ದರ (%)

2019–20; 8.50
2018–19; 8.65
2017–18; 8.55
2016–17; 8.65
2015–16; 8.80
2014–15; 8.75
2013–14; 8.75
2012–13; 8.50

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.