ADVERTISEMENT

ವಾಯಿದಾ ವಹಿವಾಟಿನ ಪರಿಣಾಮ: ಸೂಚ್ಯಂಕ ಇಳಿಕೆ

ಪಿಟಿಐ
Published 30 ಸೆಪ್ಟೆಂಬರ್ 2021, 15:21 IST
Last Updated 30 ಸೆಪ್ಟೆಂಬರ್ 2021, 15:21 IST
   

ಮುಂಬೈ: ಜಾಗತಿಕ ವಿದ್ಯಮಾನಗಳ ಜೊತೆಗೆ ದೇಶಿ ಮಾರುಕಟ್ಟೆಯಲ್ಲಿನ ಸರ್ಕಾರಿ ಸಾಲಪತ್ರಗಳ ಸೆಪ್ಟೆಂಬರ್‌ ತಿಂಗಳ ವಾಯಿದಾ ವಹಿವಾಟು ಅಂತ್ಯವಾಗಲಿರುವುದು ಷೇರುಪೇಟೆಗಳಲ್ಲಿ ಗುರುವಾರ ವಹಿವಾಟು ಇಳಿಕೆಗೆ ಪ್ರಮುಖ ಕಾರಣವಾದವು.

ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಇಳಿಕೆ ಕಾಣುತ್ತಿರುವುದು ಸಹ ಷೇರುಪೇಟೆಗಳ ನಕಾರಾತ್ಮಕ ವಹಿವಾಟಿಗೆ ಕಾರಣವಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 287 ಅಂಶ ಇಳಿಕೆ ಕಂಡು 59,126 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 93 ಅಂಶ ಇಳಿಕೆಯಾಗಿ 17,618 ಅಂಶಗಳಿಗೆ ತಲುಪಿತು.

ADVERTISEMENT

ಜಾಗತಿಕ ಮಟ್ಟದಲ್ಲಿ, ಅಮೆರಿಕದಲ್ಲಿನ ಹಣದುಬ್ಬರದ ಒತ್ತಡ, ಬಾಂಡ್‌ ಗಳಿಕೆ ಹೆಚ್ಚಳ, ಚೀನಾದಲ್ಲಿನ ವಿದ್ಯುತ್‌ ಬಿಕ್ಕಟ್ಟಿನಂತಹ ಅಂಶಗಳು ಹೂಡಿಕೆಯ ಮೇಲೆ ಪರಿಣಾಮ ಬೀರಿದವು ಎಂದು ಆಶಿಕಾ ಸ್ಟಾಕ್‌ ಬ್ರೋಕಿಂಗ್‌ನ ಸಂಶೋಧನಾ ಮುಖ್ಯಸ್ಥ ಅರಿಜಿತ್‌ ಮಲಾಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.