ADVERTISEMENT

ಈಕ್ವಿಟಿ ಎಂಎಫ್ ಬಂಡವಾಳ ಹೊರಹರಿವು ಹೆಚ್ಚಳ

ಪಿಟಿಐ
Published 11 ಆಗಸ್ಟ್ 2020, 2:24 IST
Last Updated 11 ಆಗಸ್ಟ್ 2020, 2:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ(ಎಂಎಫ್‌) ಜುಲೈ ತಿಂಗಳಲ್ಲಿ ಹೂಡಿಕೆ ಆದ ಹಣಕ್ಕಿಂತ ಹಿಂತೆಗೆದುಕೊಂಡ ಹಣದ ಮೊತ್ತ ಹೆಚ್ಚಾಗಿದೆ. ಹೀಗಾಗುತ್ತಿರುವುದು ನಾಲ್ಕು ವರ್ಷಗಳಲ್ಲಿ ಇದೇ ಮೊದಲು.

ಜುಲೈನಲ್ಲಿ ಹೂಡಿಕೆ ಆದ ಮೊತ್ತಕ್ಕಿಂತ, ಹೊರಹರಿವು ಕಂಡ ಮೊತ್ತ ₹ 2,480 ಕೋಟಿಯಷ್ಟು ಹೆಚ್ಚು. ಮ್ಯೂಚುವಲ್ ಫಂಡ್‌ ಉದ್ಯಮದಿಂದ ಜುಲೈನಲ್ಲಿ ಒಟ್ಟಾರೆ ₹ 89,813 ಕೋಟಿ ಬಂಡವಾಳ ಹೂಡಿಕೆಯಾಗಿದೆ. ಜೂನ್‌ನಲ್ಲಿ ₹ 7,265 ಕೋಟಿಯಷ್ಟೇ ಹೂಡಿಕೆಯಾಗಿತ್ತು ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ ಮಾಹಿತಿ ನೀಡಿದೆ.

ಹೂಡಿಕೆದಾರರು ಲಾಭ ಗಳಿಸಿಕೊಳ್ಳಲು ಮಲ್ಟಿ ಕ್ಯಾಪ್‌ ಮತ್ತು ಲಾರ್ಜ್‌ ಕ್ಯಾಪ್‌ ಫಂಡ್‌ಗಳಿಂದ ಹಣ ಹಿಂದಕ್ಕೆ ಪಡೆದಿದ್ದಾರೆ ಎಂದು ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಎನ್‌. ವೆಂಕಟೇಶ್‌ ತಿಳಿಸಿದ್ದಾರೆ. ಷೇರುಪೇಟೆ ವಹಿವಾಟು ಏರುಮಖವಾಗಿದ್ದರಿಂದ ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ADVERTISEMENT

ಸುರಕ್ಷಿತ ಹೂಡಿಕೆಯ ಮಾರ್ಗವಾಗಿರುವ ಚಿನ್ನದಲ್ಲಿ ಹಣ ತೊಡಗಿಸುವುದು ಸಹ ಹೆಚ್ಚಾಗಿದೆ. ಚಿನ್ನದ ವಿನಿಮಯ ವಹಿವಾಟು ನಿಧಿಯಲ್ಲಿ (ಇಟಿಎಫ್‌) ₹ 921 ಕೋಟಿ ತೊಡಗಿಸಿದ್ದಾರೆ. ಜೂನ್‌ನಲ್ಲಿನ ಹೂಡಿಕೆ ₹ 494 ಕೋಟಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.