ನವದೆಹಲಿ: ಜುಲೈ ತಿಂಗಳಿನಲ್ಲಿ ಕಾರ್ಮಿಕರ ರಾಜ್ಯ ವಿಮಾ ನಿಗಮದಡಿ (ಇಎಸ್‌ಐಸಿ) 20.36 ಲಕ್ಷ ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಶುಕ್ರವಾರ ತಿಳಿಸಿದೆ.
ಜೂನ್ ತಿಂಗಳಿನಲ್ಲಿ 19.37 ಲಕ್ಷ ಸದಸ್ಯರು ನೋಂದಣಿ ಮಾಡಿಕೊಂಡಿದ್ದರು. ಇದಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ 5ರಷ್ಟು ಹೆಚ್ಚಳವಾಗಿದೆ. ಇದೇ ತಿಂಗಳಿನಲ್ಲಿ ಇಎಸ್‌ಐ ಯೋಜನೆಯಡಿ 31,146 ಕಂಪನಿಗಳು ಹೊಸದಾಗಿ ನೋಂದಣಿಯಾಗಿವೆ ಎಂದು ತಿಳಿಸಿದೆ.
ಒಟ್ಟು 20.36 ಲಕ್ಷ ಸದಸ್ಯರ ಪೈಕಿ, ಮಹಿಳಾ ಸದಸ್ಯರ ಸಂಖ್ಯೆ 4.33 ಲಕ್ಷವಿದೆ. 9.85 ಲಕ್ಷ ಸದಸ್ಯರು (ಶೇ 48) 25 ವರ್ಷದ ವಯೋಮಾನದವರು. 88 ಲಿಂಗತ್ವ ಅಲ್ಪಸಂಖ್ಯಾತರು ಉದ್ಯೋಗಿಗಳ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಸಮಾಜದ ಪ್ರತಿ ವರ್ಗಕ್ಕೂ ತನ್ನ ಪ್ರಯೋಜನಗಳನ್ನು ತಲುಪಿಸುವ ಇಎಸ್ಐಸಿಯ ಬದ್ಧತೆಯನ್ನು ಇದು ದೃಢೀಕರಿಸುತ್ತದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.