ADVERTISEMENT

ರಫ್ತು: ಜುಲೈನಲ್ಲಿ ಶೇ 10ರಷ್ಟು ಇಳಿಕೆ

ಪಿಟಿಐ
Published 15 ಆಗಸ್ಟ್ 2020, 12:31 IST
Last Updated 15 ಆಗಸ್ಟ್ 2020, 12:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸತತ ಐದನೇ ತಿಂಗಳಿನಲ್ಲಿಯೂ ದೇಶದ ರಫ್ತು ವಹಿವಾಟು ಇಳಿಕೆ ಕಂಡಿದೆ. ಜುಲೈನಲ್ಲಿ ಶೇ 10.21ರಷ್ಟು ಇಳಿಕೆಯಾಗಿದ್ದು, ₹ 1.80 ಲಕ್ಷ ಕೋಟಿ ಮೌಲ್ಯದ ಸರಕುಗಳು ರಫ್ತಾಗಿವೆ.

ಹೀಗಿದ್ದರೂ, ಏಪ್ರಿಲ್‌, ಮೇ ಮತ್ತು ಜೂನ್‌ ತಿಂಗಳಿಗೆ ಹೋಲಿಸಿದರೆ ಜುಲೈನಲ್ಲಿ ಇಳಿಕೆ ಪ್ರಮಾಣ ಕಡಿಮೆ ಇದೆ. ಏಪ್ರಿಲ್‌ನಲ್ಲಿ ಶೇ 60ರಷ್ಟು, ಮೇನಲ್ಲಿ 36ರಷ್ಟು ಹಾಗೂ ಜೂನ್‌ನಲ್ಲಿ ಶೇ 12ರಷ್ಟು ಇಳಿಕೆಯಾಗಿತ್ತು.

ಪೆಟ್ರೋಲಿಯಂ ಮತ್ತು ಚರ್ಮದ ಉತ್ಪನ್ನಗಳು, ಹರಳು, ಚಿನ್ನಾಭರಣ ವಸ್ತುಗಳ ರಫ್ತು ಇಳಿಕೆಯಾಗಿದೆ. ಇದು ಒಟ್ಟಾರೆ ರಫ್ತು ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎಂದು ಸರ್ಕಾರ ಹೇಳಿದೆ.

ADVERTISEMENT

ಆಮದು ವಹಿವಾಟು ಶೇ 28ರಷ್ಟು ಕಡಿಮೆಯಾಗಿದ್ದು, ₹ 2.13 ಲಕ್ಷ ಕೋಟಿ ಮೌಲ್ಯದ ಸರಕುಗಳು ಆಮದಾಗಿವೆ. ತೈಲ ಆಮದು ಶೇ 32ರಷ್ಟು ಇಳಿಕೆ ಆಗಿದ್ದರೆ, ಚಿನ್ನದ ಆಮದು ಶೇ 4ರಷ್ಟು ಹೆಚ್ಚಾಗಿದೆ.

ಏಪ್ರಿಲ್‌ ಜೂನ್‌ ಅವಧಿಯಲ್ಲಿ ರಫ್ತು ವಹಿವಾಟು ಶೇ 30ರಷ್ಟು ಹಾಗೂ ಆಮದು ವಹಿವಾಟು ಶೇ 47ರಷ್ಟು ಇಳಿಕೆಯಾಗಿದೆ.

ನಕಾರಾತ್ಮಕ ಬೆಳವಣಿಗೆ (%)

ಪೆಟ್ರೋಲಿಯಂ ಉತ್ಪನ್ನಗಳು- 51

ಹರಳು, ಚಿನ್ನಾಭರಣ- 50

ಚರ್ಮದ ಉತ್ಪನ್ನಗಳು- 27

ಸಿದ್ಧ ಉಡುಪು- ;22

ಬಾದಾಮಿ- 21

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.