ADVERTISEMENT

ಸಾಮಾಜಿಕ ಉದ್ದೇಶಕ್ಕೆ ನಿಧಿ ಸಂಗ್ರಹಿಸಲು ಒಂದಾದ ಉದ್ಯಮಿಗಳು

ಪಿಟಿಐ
Published 20 ಜುಲೈ 2022, 2:57 IST
Last Updated 20 ಜುಲೈ 2022, 2:57 IST
   

ಮುಂಬೈ: ಉದ್ಯಮಿಗಳು, ಉದ್ಯಮಿಗಳ ಕುಟುಂಬದ ಸದಸ್ಯರು ಜೊತೆಯಾಗಿ ಸಾಮಾಜಿಕ ಉದ್ದೇಶಗಳಿಗಾಗಿ 2030ರೊಳಗೆ ಒಟ್ಟು 1 ಬಿಲಿಯನ್ ಡಾಲರ್ (ಅಂದಾಜು ₹7,989 ಕೋಟಿ) ನಿಧಿ ಸಂಗ್ರಹಿಸುವುದಾಗಿ ಮಂಗಳವಾರ ಹೇಳಿದ್ದಾರೆ.

ನಿಸಾ ಗೋದ್ರೆಜ್, ರೋಹಿಣಿ ನಿಲೇಕಣಿ, ವಿಪ್ರೊ ಕಂಪನಿಯ ಪ್ರೇಮ್‌ಜಿ ಕುಟುಂಬದ ಸದಸ್ಯರು, ಜೆರೊದಾ ಕಂಪನಿಯ ನಿಖಿಲ್ ಕಾಮತ್ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.

ಈ ವೇದಿಕೆಯಲ್ಲಿ ಒಗ್ಗೂಡಿರುವ ಪ್ರತಿಯೊಬ್ಬರೂ ಪ್ರತಿ ವರ್ಷ ಕನಿಷ್ಠ ₹ 50 ಲಕ್ಷ ದೇಣಿಗೆ ನೀಡಲಿದ್ದಾರೆ. ವೇದಿಕೆಯು 2030ರೊಳಗೆ ಐದು ಸಾವಿರ ಸದಸ್ಯರನ್ನು ಹೊಂದುವ ಗುರಿ ಇರಿಸಿಕೊಂಡಿದೆ.

ADVERTISEMENT

ದೇಶವು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ನೆರವಾಗುವುದು ಇವರು ನಿಧಿ ಸಂಗ್ರಹಿಸುವುದರ ಹಿಂದಿರುವ ಉದ್ದೇಶ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.