ADVERTISEMENT

ಆಹಾರ ಸಂಸ್ಕರಣಾ ವಲಯ: ಎಫ್‌ಡಿಐ ಶೇ 57ರಷ್ಟು ಇಳಿಕೆ

ಪಿಟಿಐ
Published 27 ಜುಲೈ 2021, 13:39 IST
Last Updated 27 ಜುಲೈ 2021, 13:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಆಹಾರ ಸಂಸ್ಕರಣಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ) 2019–20ಕ್ಕೆ ಹೋಲಿಸಿದರೆ 2020–21ರಲ್ಲಿ ಶೇ 57ರಷ್ಟು ಕಡಿಮೆ ಆಗಿದ್ದು, ₹ 2,926 ಕೋಟಿಗಳಷ್ಟಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

2019–20ರಲ್ಲಿ ಈ ವಲಯದಲ್ಲಿ ಎಫ್‌ಡಿಐ ₹ 6,694 ಕೋಟಿ ಆಗಿತ್ತು.ಆಹಾರ ಸಂಸ್ಕರಣಾ ಉದ್ಯಮಗಳ ರಾಜ್ಯ ಸಚಿವ ಪ್ರಹ್ಲಾದ್‌ ಸಿಂಗ್ ಪಟೇಲ್‌ ಅವರು ಈ ಕುರಿತು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಸರ್ಕಾರ ಅಥವಾ ಆರ್‌ಬಿಐ ಅನುಮತಿ ಇಲ್ಲದೆಯೇ ಈ ವಲಯದಲ್ಲಿ ಶೇ 100ರಷ್ಟು ಎಫ್‌ಡಿಐಗೆ ಅವಕಾಶ ಇದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಎಫ್‌ಇಎಂಎ) ಪ್ರಕಾರ, ಎಫ್‌ಡಿಐ ಸ್ವೀಕರಿಸುವ ಭಾರತೀಯ ಕಂಪನಿಯು ಆರ್‌ಬಿಐಗೆ ಅದರ ಮಾಹಿತಿಯನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ.

ADVERTISEMENT

ಈ ವಲಯದ ಒಟ್ಟಾರೆ ಬೆಳವಣಿಗೆಗಾಗಿ ಕೇಂದ್ರ ಸರ್ಕಾರವುಪ್ರಧಾನ ಮಂತ್ರಿ ಕಿಸಾನ್‌ ಸಂಪದ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಪಟೇಲ್‌ ತಿಳಿಸಿದ್ದಾರೆ.

ಈವರೆಗೆ ಒಟ್ಟು 41 ಮೆಗಾ ಫುಡ್‌ ಪಾರ್ಕ್‌ಗೆ, 353 ಕೋಲ್ಡ್‌ ಚೈನ್ ಪ್ರಾಜೆಕ್ಟ್‌, 63 ಕಾರ್ಗೊ ಪ್ರೊಸೆಸಿಂಗ್ ಕ್ಲಸ್ಟರ್‌, 292 ಆಹಾರ ಸಂಸ್ಕರಣಾ ಯೋಜನೆ ಮತ್ತು 6 ಆಪರೇಷನ್‌ ಗ್ರೀನ್‌ ಪ್ರಾಜೆಕ್ಟ್‌ಗಳಿಗೆ ಸಚಿವಾಲಯವು ಒಪ್ಪಿಗೆ ನೀಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಯೋಜನೆಗಳು ಪೂರ್ಣಗೊಂಡಾಗ 34 ಲಕ್ಷ ರೈತರಿಗೆ ಪ್ರಯೋಜನ ಆಗುವ ಅಂದಾಜು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.