ನವದೆಹಲಿ: ಐದು ದಿನಗಳ ವಿಶೇಷ ಹಬ್ಬದ ಮಾರಾಟ ಸಂದರ್ಭದಲ್ಲಿ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಇಂಡಿಯಾ
₹ 15 ಸಾವಿರ ಕೋಟಿಗಳಷ್ಟು ಮಾರಾಟ ನಡೆಸಿವೆ ಎಂದು ಅಂದಾಜಿಸಲಾಗಿದೆ.
ಸ್ಮಾರ್ಟ್ಫೋನ್, ಗೃಹೋಪಯೋಗಿ ಸಲಕರಣೆ ಮತ್ತು ಫ್ಯಾಷನ್ ಉತ್ಪನ್ನಗಳು ದಾಖಲೆ ಮಾರಾಟವಾಗಿವೆ ಎಂದು ಎರಡೂ ಸಂಸ್ಥೆಗಳು ಹೇಳಿ ಕೊಂಡಿವೆ. ಹಿಂದಿನ ವರ್ಷ ಕ್ಕಿಂತ ಈ ಬಾರಿ ಮಾರಾಟ ಶೇ 64ರಷ್ಟು ಹೆಚ್ಚಾಗಿದೆ. 2017ರಲ್ಲಿ ₹ 10,325 ಕೋಟಿ ವಹಿವಾಟು ನಡೆದಿತ್ತು ಎಂದು ರೆಡ್ಸೀರ್ ಕನ್ಸಲ್ಟಿಂಗ್ ಸಂಸ್ಥೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.