ADVERTISEMENT

‘ಏರ್‌ ಇಂಡಿಯಾಗೆ ಹಣಕಾಸಿನ ಬಿಡ್‌ ಶೀಘ್ರ’–ಹರದೀಪ್ ಸಿಂಗ್ ಪುರಿ

ಪಿಟಿಐ
Published 26 ಮಾರ್ಚ್ 2021, 16:46 IST
Last Updated 26 ಮಾರ್ಚ್ 2021, 16:46 IST
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ   

ನವದೆಹಲಿ: ಏರ್‌ ಇಂಡಿಯಾ ಖಾಸಗೀಕರಣದ ವಿಚಾರದಲ್ಲಿ ಕೇಂದ್ರ ಸರ್ಕಾರವು ಹಣಕಾಸಿನ ಬಿಡ್‌ಗಳನ್ನು ಮುಂದಿನ ಕೆಲವು ದಿನಗಳಲ್ಲಿ ಆಹ್ವಾನಿಸಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

‘ಏರ್‌ ಇಂಡಿಯಾ ಕಂಪನಿಯನ್ನು ಖಾಸಗಿಯವರಿಗೆ ಮಾರಾಟ ಮಾಡಬೇಕು ಅಥವಾ ಕಂಪನಿಯನ್ನು ಮುಚ್ಚಬೇಕು. ಇವೆರಡನ್ನು ಹೊರತುಪಡಿಸಿದರೆ ಬೇರೆ ಆಯ್ಕೆ ಇಲ್ಲ’ ಎಂದೂ ಅವರು ಹೇಳಿದ್ದಾರೆ.

‘ಖಾಸಗಿಯವರು ಖರೀದಿ ಮಾಡುವವರೆಗೆ ಸರ್ಕಾರವೇ ಕಂಪನಿಯನ್ನು ನಡೆಸಿಕೊಂಡು ಹೋಗಬೇಕಿದೆ. ಬಿಡ್ಡರ್‌ಗಳಿಂದ ಹಣಕಾಸಿನ ಬಿಡ್ ಬಂದ ನಂತರ, ನಾವು ಕಂಪನಿಯನ್ನು ಖಾಸಗಿಯವರಿಗೆ ಹಸ್ತಾಂತರ ಮಾಡುವುದಷ್ಟೇ ಬಾಕಿ ಉಳಿಯಲಿದೆ’ ಎಂದು ಅವರು ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದಾರೆ.

ADVERTISEMENT

‘ಏರ್‌ ಇಂಡಿಯಾದ ನಿರ್ವಹಣೆ ಸರಿಯಾಗಿ ಇಲ್ಲದಿದ್ದ ಕಾರಣ ಒಟ್ಟು ಸಾಲದ ಮೊತ್ತವು ₹ 60 ಸಾವಿರ ಕೋಟಿ ಆಗಿದೆ. ನಾವು ಪ್ರತಿದಿನ ₹ 20 ಕೋಟಿ ನಷ್ಟ ಅನುಭವಿಸುತ್ತಿದ್ದೇವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಹೋಗಿ ಹಣ ಕೊಡಿ ಎಂದು ಕೇಳುವ ಶಕ್ತಿ ನನಗಿಲ್ಲ’ ಎಂದು ಪುರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.