ADVERTISEMENT

ಏರ್‌ಟೆಲ್‌ ಸೇರಿದಂತೆ 5 ಕಂಪನಿಗಳ ಎಂ–ಕ್ಯಾಪ್‌ ಏರಿಕೆ

ಪಿಟಿಐ
Published 15 ಡಿಸೆಂಬರ್ 2024, 13:49 IST
Last Updated 15 ಡಿಸೆಂಬರ್ 2024, 13:49 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕಳೆದ ಒಂದು ವಾರದಲ್ಲಿ ಷೇರುಪೇಟೆಯ ಏರಿಕೆಯಿಂದಾಗಿ ಪ್ರಮುಖ ಹತ್ತು ಕಂಪನಿಗಳ ಪೈಕಿ ಐದು ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯಕ್ಕೆ (ಎಂ–ಕ್ಯಾಪ್‌) ₹1.13 ಲಕ್ಷ ಕೋಟಿ ಸೇರ್ಪಡೆಯಾಗಿದೆ. 

ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 623 ಅಂಶ ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 90 ಅಂಶ ಏರಿಕೆ ಕಂಡಿವೆ. 

ಭಾರ್ತಿ ಏರ್‌ಟೆಲ್‌ ₹47,836 ಕೋಟಿ, ಇನ್ಫೊಸಿಸ್‌ ₹31,826 ಕೋಟಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ₹11,887 ಕೋಟಿ, ಐಸಿಐಸಿಐ ಬ್ಯಾಂಕ್‌ ₹11,760 ಕೋಟಿ ಹಾಗೂ ಟಿಸಿಎಸ್‌ ಎಂ–ಕ್ಯಾಪ್‌ಗೆ ₹9,805 ಕೋಟಿ ಸೇರ್ಪಡೆಯಾಗಿದೆ. 

ADVERTISEMENT

ರಿಲಯನ್ಸ್ ಇಂಡಸ್ಟ್ರಿಸ್‌ ₹52,031 ಕೋಟಿ, ಭಾರತೀಯ ಜೀವ ವಿಮಾ ನಿಗಮ ₹32,067 ಕೋಟಿ, ಎಚ್‌ಸಿಎಲ್‌ ₹22,250 ಕೋಟಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ₹2,052 ಕೋಟಿ ಹಾಗೂ ಐಟಿಸಿ ಎಂ–ಕ್ಯಾಪ್‌ನಲ್ಲಿ ₹1,376 ಕೋಟಿ ಕರಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.