ಬೆಂಗಳೂರು: ದೇಶದಾದ್ಯಂತ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‍ಎಂಇ) ಸುಲಭವಾಗಿ ಹಣಕಾಸು ನೆರವು ಒದಗಿಸಲು ಇ–ಕಾಮರ್ಸ್ ಸಂಸ್ಥೆ ಫ್ಲಿಪ್‍ಕಾರ್ಟ್ ಸಾಲದ ನೆರವು ಯೋಜನೆ ಪರಿಷ್ಕರಿಸಿದೆ.
ಆನ್‍ಲೈನ್ ವಹಿವಾಟಿನಲ್ಲಿ ತೊಡಗಿರುವ ಎಂಎಸ್‍ಎಂಇಗಳಿಗೆ ನೆರವಾಗಲು `ಗ್ರೋಥ್ ಕ್ಯಾಪಿಟಲ್’ ಯೋಜನೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಒಂದು ದಿನದಲ್ಲಿ ಸಾಲಕ್ಕೆ ಅನುಮೋದನೆ ನೀಡುವ ಮತ್ತು 48 ಗಂಟೆಯೊಳಗೆ ಸಾಲದ ಹಣವು ವ್ಯಾಪಾರಿಗಳ ಕೈ ಸೇರುವ ವಿಶಿಷ್ಟ ಯೋಜನೆ ಇದಾಗಿದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.