ನವದೆಹಲಿ: ವಾಲ್‌ಮಾರ್ಟ್ ಮಾಲೀಕತ್ವದ ಇ–ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಇಂಡಿಯಾ 2024–25ರ ಆರ್ಥಿಕ ವರ್ಷದಲ್ಲಿ ₹5,189 ಕೋಟಿ ನಷ್ಟ ಕಂಡಿದೆ ಎಂದು ಬ್ಯುಸಿನೆಸ್ ಇಂಟಲಿಜೆನ್ಸ್ ಸಂಸ್ಥೆ ಟೋಫ್ಲರ್ ತಿಳಿಸಿದೆ.
2023–24ರ ಆರ್ಥಿಕ ವರ್ಷದಲ್ಲಿ ₹4,248 ಕೋಟಿ ನಷ್ಟ ಕಂಡಿತ್ತು ಎಂದು ತಿಳಿಸಿದೆ.
ವರಮಾನದಲ್ಲಿ ಶೇ 17ರಷ್ಟು ಹೆಚ್ಚಳವಾಗಿದ್ದು, ₹82,787 ಕೋಟಿಯಾಗಿದೆ. ಇದರ ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹70,541 ಕೋಟಿಯಾಗಿದೆ. ಕಂಪನಿಯ ಒಟ್ಟು ವೆಚ್ಚವು ₹88,121 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದೆ.
ಫ್ಲಿಪ್‌ಕಾರ್ಟ್ ಈ ಕುರಿತು ಕೇಳಿದ ಮಾಹಿತಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.