ADVERTISEMENT

ಬಹುಕರೆನ್ಸಿ ಪ್ರವಾಸಿ ಕಾರ್ಡ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 20:15 IST
Last Updated 26 ಆಗಸ್ಟ್ 2019, 20:15 IST
   

ಬೆಂಗಳೂರು: ವಿದೇಶಿ ವಿನಿಮಯ ವಹಿವಾಟಿನ ಬುಕ್‍ಮೈಫೋರೆಕ್ಸ್‌ಡಾಟ್‌ಕಾಂ, ಯೆಸ್ ಬ್ಯಾಂಕ್ ಮತ್ತು ವೀಸಾ ಸಹಯೋಗದಲ್ಲಿ ಬಹುಕರೆನ್ಸಿ ಫೋರೆಕ್ಸ್ ಟ್ರಾವೆಲ್ ಕಾರ್ಡ್‌ ಬಿಡುಗಡೆ ಮಾಡಿದೆ.

ವಿದೇಶ ಪ್ರಯಾಣ ಕೈಗೊಳ್ಳುವ ದೇಶಿ ಪ್ರಯಾಣಿಕರಿಗೆ ಇದರಿಂದ ಹೆಚ್ಚು ಅನುಕೂಲತೆ ದೊರೆಯಲಿದೆ. ಬುಕ್‍ಮೈಫೊರೆಕ್ಸ್ ತಾಣದಲ್ಲಿ ಗ್ರಾಹಕರು ಈ ಪ್ರೀಪೇಯ್ಡ್‌ ಪ್ರವಾಸಿ ಕಾರ್ಡ್‌ ಖರೀದಿಸಬಹುದಾಗಿದೆ.

ಪ್ರಮುಖ ನಗರಗಳಲ್ಲಿ ಖರೀದಿದಾರರ ಮನೆ ಬಾಗಿಲಿಗೆ ಈ ಕಾರ್ಡ್ ತಲುಪಿಸಲಾಗುವುದು. ಇದು ದೇಶದ ಮೊದಲ ಸಹ ಬ್ರ್ಯಾಂಡೆಡ್ ಬಹು ಕರೆನ್ಸಿ ಟ್ರಾವೆಲ್ ಪ್ರೀಪೇಯ್ಡ್ ಕಾರ್ಡ್‌ ಆಗಿದೆ.

ADVERTISEMENT

ಈ ಕಾರ್ಡ್‌ ಹೊಂದಿದವರು ವಿವಿಧ ದೇಶಗಳ ಕರೆನ್ಸಿಗಳನ್ನು ನಗದು ರೂಪದಲ್ಲಿ ಇಟ್ಟುಕೊಳ್ಳುವ ಅಗತ್ಯ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.