ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹ ಜೂನ್ 14ಕ್ಕೆ ಕೊನೆಗೊಂಡ ವಾರದಲ್ಲಿ ₹ 931 ಕೋಟಿಗಳಷ್ಟು ಕಡಿಮೆಯಾಗಿ ₹ 29.11 ಲಕ್ಷ ಕೋಟಿಗೆ ಇಳಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಾಹಿತಿ ನೀಡಿದೆ.
ಅದಕ್ಕೂ ಹಿಂದಿನ ವಾರ ₹ 11,592 ಕೋಟಿಗಳಷ್ಟು ಹೆಚ್ಚಾಗಿ ₹ 29.22 ಲಕ್ಷ ಕೋಟಿಗಳಿಗೆ ಏರಿಕೆಯಾಗಿತ್ತು.
2018ರ ಏಪ್ರಿಲ್ 13ರಂದು ಮೀಸಲು ಸಂಗ್ರಹ ₹ 29.39 ಲಕ್ಷ ಕೋಟಿಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು.
ವಿದೇಶಿ ಕರೆನ್ಸಿಗಳ ಸಂಗ್ರಹ ₹ 9,315 ಕೋಟಿ ಇಳಿಕೆಯಾಗಿ ₹ 27.21 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಇದರಿಂದ ಮೀಸಲು ಸಂಗ್ರಹವೂ ತಗ್ಗಿದೆ. ಚಿನ್ನದ ಮೀಸಲು ಸಂಗ್ರಹ ₹ 1.58 ಲಕ್ಷ ಕೋಟಿಗಳಷ್ಟಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್) ಭಾರತದ ಕರೆನ್ಸಿ ಸಂಗ್ರಹ ₹ 138 ಕೋಟಿಗಳಷ್ಟು ಕರಗಿ₹ 23,046 ಕೋಟಿಗಳಿಗೆ ತಲುಪಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.