ADVERTISEMENT

ಎಫ್‌ಪಿಐ: ಜೂನ್‌ನಲ್ಲಿ ₹ 50,203 ಕೋಟಿ ಹೊರಹರಿವು

2022ರ ಮೊಲದ ಆರು ತಿಂಗಳಿನಲ್ಲಿ ಒಟ್ಟಾರೆ ₹ 2.2 ಲಕ್ಷ ಕೋಟಿ ಹಿಂತೆಗೆತ

ಪಿಟಿಐ
Published 3 ಜುಲೈ 2022, 11:26 IST
Last Updated 3 ಜುಲೈ 2022, 11:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಸತತ ಒಂಬತ್ತನೇ ತಿಂಗಳಿನಲ್ಲಿಯೂ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

ಜೂನ್‌ ತಿಂಗಳಿನಲ್ಲಿ ₹ 50,203 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. 2020ರ ಮಾರ್ಚ್‌ ಬಳಿಕ ಆಗಿರುವ ಗರಿಷ್ಠ ಮೊತ್ತದ ಹೊರಹರಿವು ಇದು. 2020ರ ಮಾರ್ಚ್‌ನಲ್ಲಿ ಒಟ್ಟು ₹ 61,973 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದರು.

2022ರ ಮೊದಲ ಆರು ತಿಂಗಳಿನಲ್ಲಿ ದೇಶದ ಷೇರುಪೇಟೆಯಿಂದ ಒಟ್ಟು ₹ 2.2 ಲಕ್ಷ ಕೋಟಿ ಬಂಡವಾಳ ಹೊರಹೋಗಿದೆ.

ADVERTISEMENT

ಬಂಡವಾಳದ ಹೊರಹರಿವು ರೂಪಾಯಿ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಕಳೆದ ವಾರ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು ಮೊದಲ ಬಾರಿಗೆ ₹ 79ಕ್ಕಿಂತಲೂ ಕೆಳಗೆ ಬಂದಿತ್ತು.

ಅಲ್ಪಾವಧಿಯಲ್ಲಿ ಎಫ್‌ಪಿಐ ಹೊರಹರಿವು ಅಸ್ಥಿರವಾಗಿ ಇರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಎಚ್ಚರಿಕೆ ನೀಡಿದ್ದಾರೆ.

ಜೂನ್‌ನಲ್ಲಿ ಸಾಲಪತ್ರ ಮಾರುಕಟ್ಟೆಯಿಂದಲೂ ₹ 1,414 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ. ಮೇ ತಿಂಗಳಿನಲ್ಲಿ ₹ 5,506 ಕೋಟಿ ಹಿಂದಕ್ಕೆ ಪಡೆಯಲಾಗಿತ್ತು. ಇದಕ್ಕೆ ಹೋಲಿಸಿದರೆ ಹೊರಹರಿವು ಕಡಿಮೆ ಆಗಿದೆ.

ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ದೇಶಗಳ ಮಾರುಕಟ್ಟೆಗಳಿಗೆ ಹೋಲಿಸಿದರೆ ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೊರಹರಿವು ಆಗಿದೆ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾತ್ಸವ ಹೇಳಿದ್ದಾರೆ.

ಬಂಡವಾಳ ಹಿಂತೆಗೆತಕ್ಕೆ ಕಾರಣಗಳು

*ಅಮೆರಿಕದ ಫೆಡರಲ್‌ ರಿಸರ್ವ್‌ನಿಂದ ಬಡ್ಡಿದರ ಹೆಚ್ಚಳ

*ಹಣದುಬ್ಬರ ಏರಿಕೆ

*ದೇಶಿ ಷೇರುಗಳ ಮೌಲ್ಯ ಗರಿಷ್ಠ ಮಟ್ಟದಲ್ಲಿ ಇರುವುದು‌

=

ಹೊರಹರಿವಿನ ವಿವರ (₹ ಕೋಟಿಗಳಲ್ಲಿ)

ಜನವರಿ; 28,526

ಫೆಬ್ರುವರಿ; 38,068

ಮಾರ್ಚ್‌; 50,068

ಏಪ್ರಿಲ್‌; 22,688

ಮೇ; 36,518

ಜೂನ್‌; ₹ 50,203

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.