ADVERTISEMENT

ಬಂಡವಾಳ ಸರಕುಗಳ ವಲಯದ ಮೇಲೆ ಎಫ್‌ಪಿಐ ಗಮನ: ಹೂಡಿಕೆ ತಜ್ಞ ವಿಜಯಕುಮಾರ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 19:21 IST
Last Updated 19 ಮಾರ್ಚ್ 2023, 19:21 IST

ಬೆಂಗಳೂರು: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಬಂಡವಾಳ ಸರಕುಗಳ ವಲಯದಲ್ಲಿ ನಿರಂತರವಾಗಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ತಿಳಿಸಿದರು.

ಹಣಕಾಸು ವಲಯಗಳಲ್ಲಿ 15 ದಿನಗಳಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಮುಂದಿನ 15 ದಿನಗಳ ಅವಧಿಯಲ್ಲಿ ಬಂಡವಾಳ ಹಿಂದಕ್ಕೆ ಪಡೆಯುತ್ತಿದ್ದಾರೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅಮೆರಿಕದಲ್ಲಿ ಹಲವು ಬ್ಯಾಂಕ್‌ಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದು ಹಾಗೂ ಅದರ ಪರಿಣಾಮವು ಬೇರೆ ಕಡೆಗಳಿಗೂ ಹರಡುವ ಆತಂಕ ಇರುವುದರಿಂದ ಅಲ್ಪಾವಧಿಯಲ್ಲಿ ವಿದೇಶಿ ಹೂಡಿಕೆದಾರರು ಖರೀದಿಯತ್ತ ಹೆಚ್ಚಿನ ಗಮನ ಹರಿಸುವುದು ಕಷ್ಟ ಎಂದರು.

ADVERTISEMENT

ಮಾರ್ಚ್‌ 1 ರಿಂದ 17ರವರೆಗೆ ನಡೆದಿರುವ ವಹಿವಾಟಿನಲ್ಲಿ ₹11,344 ಕೋಟಿ ಮೌಲ್ಯದ ಷೇರು
ಗಳನ್ನು ಖರೀದಿಸಿದ್ದಾರೆ. ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಇರುವ ಮಾಹಿತಿಯ ಪ್ರಕಾರ, 2023ರಲ್ಲಿ ಮಾರ್ಚ್‌ 17ರವರೆಗಿನ ಅವಧಿಯಲ್ಲಿ ಒಟ್ಟು ₹23,283 ಕೋಟಿ ಮೌಲ್ಯ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೂಡಿಕೆದಾರರು ಜನವರಿಯಲ್ಲಿ ತಿಂಗಳಿನಲ್ಲಿ ₹28,852 ಕೋಟಿ ಮತ್ತು ಫೆಬ್ರುವರಿಯಲ್ಲಿ ₹5,294 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದರು.

ವಿದೇಶಿ ಹೂಡಿಕೆದಾರರು ಮಾರ್ಚ್‌ 1 ರಿಂದ 17ರವರೆಗೆ ನಡೆದಿರುವ ವಹಿವಾಟು ಅವಧಿಯಲ್ಲಿ ಸಾಲಪತ್ರ ಮಾರುಕಟ್ಟೆಗಳಿಂದ ₹2,550 ಕೋಟಿ ಮೊತ್ತವನ್ನು ಹಿಂದಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.