ADVERTISEMENT

ಎಫ್‌ಪಿಐ ಹೊರಹರಿವು ಮುಂದುವರಿಕೆ

ಪಿಟಿಐ
Published 10 ಜನವರಿ 2019, 20:00 IST
Last Updated 10 ಜನವರಿ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2019ರಲ್ಲಿಯೂವಿದೇಶಿ ಸಾಂಸ್ಥಿಕ ಬಂಡವಾಳದ (ಎಫ್‌ಪಿಐ) ಹೊರಹರಿವು ಮುಂದುವರಿಯಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾರ್ವತ್ರಿಕ ಚುನಾವಣೆಯ ಬಳಿಕ ಒಂದು ಸ್ಥಿರ ಸರ್ಕಾರ ರಚನೆ ಆಗುವುದು ಹಾಗೂ ಆರ್ಥಿಕತೆ ಚೇತರಿಕೆ ಕಾಣುತ್ತಿದೆ ಎನ್ನುವ ವಿದ್ಯಮಾನಗಳ ಬಗ್ಗೆ ಖಾತರಿ ಮೂಡದ ಹೊರತು ಬಂಡವಾಳ ಹೂಡಿಕೆಯ ಬಗ್ಗೆ ಏನನ್ನೂ ಹೇಳಲಾಗದು ಎಂದಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) 2018ರಲ್ಲಿ ದೇಶದ ಬಂಡವಾಳ ಮಾರುಕಟ್ಟೆಯಿಂದ 83 ಸಾವಿರ ಹಿಂದಕ್ಕೆ ಪಡೆದಿದ್ದಾರೆ. 2002ರ ಬಳಿಕ ಅತಿ ಹೆಚ್ಚಿನ ಬಂಡವಾಳ ಹೊರಹರಿವು ಇದಾಗಿದೆ.

ಅಮೆರಿಕದಲ್ಲಿ ಬಡ್ಡಿದರ ಏರಿಕೆ, ಕಚ್ಚಾ ತೈಲ ದರ ಹೆಚ್ಚಳ ಹಾಗೂ ರೂಪಾಯಿ ಮೌಲ್ಯ ಇಳಿಕೆಯಿಂದ ಬಂಡವಾಳ ಹೊರಹರಿವು ಹೆಚ್ಚಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.