ADVERTISEMENT

ಸಾಲಪತ್ರ ಮಾರುಕಟ್ಟೆ: ಎಫ್‌ಪಿಐ ಹೂಡಿಕೆ ₹12,400 ‌ಕೋಟಿ

ಪಿಟಿಐ
Published 28 ನವೆಂಬರ್ 2023, 15:49 IST
Last Updated 28 ನವೆಂಬರ್ 2023, 15:49 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಭಾರತದ ಸಾಲಪತ್ರ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ನವೆಂಬರ್‌ 1ರಿಂದ 27ರವರೆಗೆ ಒಟ್ಟು ₹12,400 ಕೋಟಿ ಹೂಡಿಕೆ ಮಾಡಿದ್ದಾರೆ. 2021ರ ಸೆಪ್ಟೆಂಬರ್‌ ಬಳಿಕ ಆಗಿರುವ ಗರಿಷ್ಠ ಹೂಡಿಕೆ ಇದಾಗಿದೆ.

ಬಾರತದ ಬಾಂಡ್‌ ಅನ್ನು ಜೆ.ಪಿ. ಮಾರ್ಗನ್‌ನ ಗ್ಲೋಬಲ್‌ ಬಾಂಡ್‌ ಇಂಡೆಕ್ಸ್‌ಗೆ ಸೇರಿಸಲಿರುವುದು ವಿದೇಶಿ ಹೂಡಿಕೆದಾರರನ್ನು ಭಾರತದ ಬಾಂಡ್‌ ಮಾರುಕಟ್ಟೆಯತ್ತ ಸೆಳೆಯುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಅಮೆರಿಕದಲ್ಲಿ ಹಣದುಬ್ಬರ ಇಳಿಕೆ ಆಗಿರುವುದರಿಂದ ಅಲ್ಲಿನ ಕೇಂದ್ರೀಯ ಬ್ಯಾಂಕ್‌ ಬಡ್ಡಿದರ ಏರಿಕೆ ಪ್ರವೃತ್ತಿಗೆ ಅಂತ್ಯ ಹಾಡುವ ಸಾಧ್ಯತೆಯೂ ವ್ಯಕ್ತವಾಗಿದೆ. ಇದರ ಜೊತೆಗೆ ಅಮೆರಿಕದ ಬಾಂಡ್ ಗಳಿಕೆ ಪ್ರಮಾಣ ಕಡಿಮೆ ಆಗಿರುವುದು ಸಹ ಹೂಡಿಕೆ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ತಿಳಿಸಿದ್ದಾರೆ.

ADVERTISEMENT

ಈ ವರ್ಷದ ಆರಂಭದಿಂದಲೂ ಸಾಲಪತ್ರ ಮಾರುಕಟ್ಟೆಯಲ್ಲಿ ಹೂಡಿಕೆ ಹೆಚ್ಚಾಗುತ್ತಿದೆ. ಮಾರ್ಚ್‌ನಲ್ಲಿ ಮಾತ್ರ ₹2,505 ಕೋಟಿ ಹಿಂದಕ್ಕೆ ಪಡೆದಿದ್ದರು. 2023ರ ಕ್ಯಾಲೆಂಡರ್ ವರ್ಷದಲ್ಲಿ ಸಾಲಪತ್ರ ಮಾರುಕಟ್ಟೆಯಲ್ಲಿ ಒಟ್ಟು ಎಫ್‌ಪಿಐ ಹೂಡಿಕೆ ₹47,900 ಕೋಟಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.